alex Certify ತಂದೆ ಆಟೋ ನಿಲ್ಲಿಸ್ತಿದ್ದ ಜಾಗದಲ್ಲಿ ಬಿಎಂಡಬ್ಲ್ಯೂ ಕಾರ್ ನಿಲ್ಲಿಸಿದ ಮೊಹಮ್ಮದ್ ಸಿರಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಆಟೋ ನಿಲ್ಲಿಸ್ತಿದ್ದ ಜಾಗದಲ್ಲಿ ಬಿಎಂಡಬ್ಲ್ಯೂ ಕಾರ್ ನಿಲ್ಲಿಸಿದ ಮೊಹಮ್ಮದ್ ಸಿರಾಜ್

मोहम्मद सिराज ने खरीदी BMW कार, इंस्टाग्राम पर शेयर की पोस्ट - Cricket  AajTak

ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಿದ್ದಾರೆ. ಈ ಬಾರಿ ಆಸ್ಟ್ರೇಲಿಯಾದಲ್ಲಿ ಯುವ ಆಟಗಾರರು ಮಿಂಚಿದ್ದಾರೆ. ಅದ್ರಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಭಾರತಕ್ಕೆ ವಾಪಸ್ ಆದ ಮೊಹಮ್ಮದ್ ಸಿರಾಜ್ ಬಿಎಂಡಬ್ಲ್ಯೂ ಕಾರು ಖರೀದಿಸಿದ್ದಾರೆ. ಸಿರಾಜ್ ಇನ್ಸ್ಟ್ರಾಗ್ರಾಮ್ ನಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಮೊಹಮ್ಮದ್ ಸಿರಾಜ್ ಗೆ ತಂದೆ ಸಾವು ಆಘಾತ ನೀಡಿತ್ತು. ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ ಒಂದು ವಾರದ ನಂತ್ರ ಸಿರಾಜ್ ತಂದೆ ಸಾವನ್ನಪ್ಪಿದ್ರು. ಕೊರೊನಾ ಪ್ರೋಟೋಕಾಲ್ ಕಾರಣದಿಂದಾಗಿ ಅಂತಿಮ ಸಂಸ್ಕಾರಕ್ಕೆ ಸಿರಾಜ್ ಬಂದಿರಲಿಲ್ಲ. ದುಃಖದ ಮಧ್ಯೆಯೂ ಸಿರಾಜ್ ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಭಾರತಕ್ಕೆ ವಾಪಸ್ ಬರ್ತಿದ್ದಂತೆ ತಂದೆ ಸಮಾಧಿಗೆ ತೆರಳಿದ್ದ ಸಿರಾಜ್, ಗೌರವ ಸಲ್ಲಿಸಿ ವಾಪಸ್ ಆಗಿದ್ದರು. ಸಿರಾಜ್ ತಂದೆ ಮೊಹಮ್ಮದ್ ಗೌಸ್ ಮಗನಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದರು. ಮಗ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂಬ ಆಸೆ ಹೊಂದಿದ್ದರು. ಆದ್ರೆ ಆಸ್ಟ್ರೇಲಿಯಾದಲ್ಲಿ ಮಗನ ಆಟ ನೋಡಲು ಸಾಧ್ಯವಾಗಲಿಲ್ಲ. ಸಿರಾಜ್ ಈಗ ಬಿಎಂಡಬ್ಲ್ಯೂ ಕಾರು ಖರೀದಿಸಿದ್ದಾರೆ. ತಂದೆ ಆಟೋ ನಿಲ್ಲಿಸುತ್ತಿದ್ದ ಜಾಗದಲ್ಲಿ ಈಗ ಕಾರಿದೆ. ಆದ್ರೆ ಇದನ್ನು ನೋಡಲು ತಂದೆಯಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...