alex Certify ಟಿವಿಯಲ್ಲಿ ಕೇವಿನ್ ಒಬ್ರಿಯಾನ್ ಕಂಡು ಪುಳಕಿತರಾದ ಮಕ್ಕಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿಯಲ್ಲಿ ಕೇವಿನ್ ಒಬ್ರಿಯಾನ್ ಕಂಡು ಪುಳಕಿತರಾದ ಮಕ್ಕಳು

WATCH: Irish Cricketer Kevin O'Brien's Adorable Kids Watching their Dad on TV is Too Pure

ಪ್ರಸಿದ್ಧಿ ಪಡೆದವರ ಮಕ್ಕಳು ತಂದೆ-ತಾಯಿಯನ್ನು ಮನೆಗಿಂತ ಟಿವಿಯಲ್ಲಿ ನೋಡುವುದೇ ಹೆಚ್ಚು. ಅದೇ ಅವರ ಕಣ್ಣಿಗೆ ಹಬ್ಬ. ಮನೆಯಲ್ಲೂ ಸಿಗದೆ, ಟಿವಿಯಲ್ಲೂ ಅಪರೂಪಕ್ಕೆ ಕಾಣಸಿಕ್ಕರೆ ಕಂಡು ಖುಷಿಪಡುವ ಮಕ್ಕಳ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ.

ಐರಿಶ್ ಕ್ರಿಕೆಟಿಗ ಕೇವಿನ್ ಒಬ್ರಿಯಾನ್ ನ ಇಬ್ಬರು ಮಕ್ಕಳು ಟಿವಿಯಲ್ಲಿ ಅಪ್ಪ‌ನನ್ನು ನೋಡುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದೇ ಕುಪ್ಪಳಿಸಿದ್ದು. ಸ್ವತಃ ಕೇವಿನ್ ಅವರೇ 5 ಸೆಕೆಂಡಿನ ಈ ಮುದ್ದಾದ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇವೆಲ್ಲವೂ ಪ್ರೀತಿ ಎಂಬ ಅಡಿಬರಹದೊಂದಿಗೆ ಮುತ್ತಿನ ಮಳೆಗರೆದಿದ್ದಾರೆ.

ಸದ್ಯ ದೇಶದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕೆಂದು ಅರಬ್ ಪ್ರವಾಸದಲ್ಲಿರುವ ತಂದೆಯನ್ನು ಟಿವಿಯಲ್ಲಿ ಮಕ್ಕಳು ನೋಡಿ ಪುಳಕಿತಗೊಂಡಿದ್ದಾರೆ.

ಮೈದಾನದಲ್ಲಿ ಬಾಲ್ ಹಿಡಿದು ನಡೆದು ಹೋಗುತ್ತಿದ್ದ ಕೇವಿನ್ ವೀಡಿಯೋ ಟಿವಿಯಲ್ಲಿ ನೋಡುತ್ತಿದ್ದಂತೆ ದೊಡ್ಡ ಮಗಳಂತೂ ಖುಷಿಯಿಂದ ಕೂಗುತ್ತಾಳೆ. ಅದನ್ನ ಕೇಳಿಸಿಕೊಂಡ ಚಿಕ್ಕ ಮಗ ಸಹ ಟಿವಿ ಬಳಿಗೆ ಓಡೋಡಿ ಬಂದು, ಪರದೆ ಮೇಲೆ ಕಾಣುವ ಅಪ್ಪನನ್ನು ಮುಟ್ಟಲು ಹೋಗುವ ವೀಡಿಯೋ ಮುದ್ದಾಗಿದೆ.

ಕೇವಿನ್ ಪೋಸ್ಟ್ ಮಾಡಿರುವ ಈ ವೀಡಿಯೋ 1.77 ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ. 19 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...