alex Certify ಸಂಗಾತಿಯೊಂದಿಗೆ ಸೆಕ್ಸ್ ಭಂಗಿಯಲ್ಲಿ ಛಾವಣಿ ಮೇಲೆ ಚುಂಬನ, ಕ್ರೀಡಾಪಟು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿಯೊಂದಿಗೆ ಸೆಕ್ಸ್ ಭಂಗಿಯಲ್ಲಿ ಛಾವಣಿ ಮೇಲೆ ಚುಂಬನ, ಕ್ರೀಡಾಪಟು ಅರೆಸ್ಟ್

ಇರಾನ್ ನ ಪಾರ್ಕರ್ ಕ್ರೀಡಾಪಟು ಅಲಿರೆಜಾ ಜಪಲಾಘಿಗಿ ಮತ್ತು ಅವರ ಸಾಹಸಿ ಸಂಗಾತಿಯನ್ನು ಬಂಧಿಸಲಾಗಿದೆ. ಮನೆಯ ಚಾವಣಿ ಮೇಲೆ ಅಶ್ಲೀಲ ಭಂಗಿಯಲ್ಲಿ ಕುಳಿತುಕೊಂಡು ಚುಂಬಿಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಫೋಟೋಗಳು ವೈರಲ್ ಆಗಿದ್ದವು.

ರಾಜಧಾನಿ ಟೆಹರಾನ್ ಪೊಲೀಸರು ಅಸಂಪ್ರದಾಯಿಕ ವರ್ತನೆ ಮತ್ತು ಷರಿಯಾ ಕಾನೂನಿಗೆ ವಿರುದ್ಧವಾದ ನಡವಳಿಕೆ ತೋರಿದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಪಾರ್ಕರ್ ಕ್ರೀಡಾಪಟು ಅಲಿರೆಜಾ ಜಪಲಾಘಿ ಸಂಗಾತಿಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಚುಂಬಿಸುತ್ತಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.

ನಿಯಮ ಮೀರಿ ಅಶ್ಲೀಲ ವರ್ತನೆ ತೋರಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಟೆಹರಾನ್ ಪೊಲೀಸ್ ಮುಖ್ಯಸ್ಥ ಹೊಸೇನ್ ರಹೀಮಿ ಹೇಳಿಕೆ ನೀಡಿದ್ದಾರೆ. ಅನುಚಿತ ಮತ್ತು ಅವಿವೇಕದ ನಡವಳಿಕೆಯನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಅವರ ಬಂಧನವನ್ನು ಸಮರ್ಥಿಸಲಾಗಿದೆ.

ಷರಿಯಾ ಕಾನೂನಿಗೆ ವಿರುದ್ಧವಾದ ವರ್ತನೆ ತೋರಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದ್ದು, ಈ ಬಂಧನದ ವಿಚಾರ ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...