alex Certify ಒತ್ತಡದಲ್ಲಿರುವ ಪಂಜಾಬ್ ಬಗ್ಗುಬಡಿಯಲು ಭರ್ಜರಿ ಲಯದಲ್ಲಿರುವ RCB ಸಜ್ಜು: ಕೊಹ್ಲಿ –ರಾಹುಲ್ ಪಡೆ ಮುಖಾಮುಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡದಲ್ಲಿರುವ ಪಂಜಾಬ್ ಬಗ್ಗುಬಡಿಯಲು ಭರ್ಜರಿ ಲಯದಲ್ಲಿರುವ RCB ಸಜ್ಜು: ಕೊಹ್ಲಿ –ರಾಹುಲ್ ಪಡೆ ಮುಖಾಮುಖಿ

ಅಹಮದಾಬಾದ್: ಚೆನ್ನೈ ವಿರುದ್ಧದ ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ಜಯಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರನೇ ಗೆಲುವಿನ ಉತ್ಸಾಹದಲ್ಲಿದೆ. ಭರ್ಜರಿ ಲಯದಲ್ಲಿರುವ ಆರ್ಸಿಬಿ 6ನೇ ಗೆಲುವಿನ ತವಕದಲ್ಲಿದ್ದರೆ ಆಡಿದ 6 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದಿರುವ ಪಂಜಾಬ್ ಕಿಂಗ್ಸ್ ೊತ್ತಡದಲ್ಲಿದೆ.

ಆರ್ಸಿಬಿ ಮತ್ತು ಪಂಜಾಬ್ ತಂಡಗಳು 26 ಸಲ ಮುಖಾಮುಖಿಯಾಗಿದ್ದು, ಆರ್ಸಿಬಿ 12 ಮತ್ತು ಪಂಜಾಬ್ 14 ಬಾರಿ ಗೆಲವು ಕಂಡಿವೆ. ಅಹಮದಾಬಾದ್ನಲ್ಲಿ ಇಂದು ಸಂಜೆ 7.30 ಕ್ಕೆ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಒತ್ತಡದಲ್ಲಿರುವ ಪಂಜಾಬ್ ತಂಡವನ್ನು ಮಣಿಸಲು ಕೊಹ್ಲಿ ಪಡೆ ಸಜ್ಜಾಗಿದೆ.

ವಿರಾಟ್ ಕೊಹ್ಲಿ, ದೇವದತ್ ಪಡಿಕಲ್, ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ತಂಡ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.  ಕೇವಲ ಎರಡು ಪಂದ್ಯಗಳಲ್ಲಿ ಗೆದ್ದಿರುವ ಪಂಜಾಬ್ ಒತ್ತಡದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...