alex Certify 14.25 ಕೋಟಿಗೆ RCBಗೆ ಮಾರಾಟವಾದ ಮ್ಯಾಕ್ಸ್ ವೆಲ್ ಹೇಳಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14.25 ಕೋಟಿಗೆ RCBಗೆ ಮಾರಾಟವಾದ ಮ್ಯಾಕ್ಸ್ ವೆಲ್ ಹೇಳಿದ್ದೇನು….?

IPL: RCB ने 14.25 करोड़ में क्यों खरीदा? खुद ग्लैन मैक्सवेल ने बताई वजह - ipl  2021 RCB player glenn maxwell speaks why he was bought for 14 25 crore tspo  - AajTak

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ರಂತಹ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಉತ್ಸುಕರಾಗಿದ್ದಾರೆ. ಐಪಿಎಲ್ 14ನೇ ಋತುವಿನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್, ಆರ್ ಸಿ ಬಿ ಪರ ಆಡಲಿದ್ದಾರೆ. ಈ ಹಿಂದೆ ಅವರು ಡಿಸಿ ಹಾಗೂ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿದ್ದರು.

ಐಪಿಎಲ್ ಹಿಂದಿನ ಋತುವಿನಲ್ಲಿ ಪಂಜಾಬ್ ಪರ ಆಡಿದ್ದ ಮ್ಯಾಕ್ಸ್ ವೆಲ್, ಕೇವಲ 108 ರನ್ ಗಳಿಸಿದ್ದರು. ಹಾಗಾಗಿ ತಂಡ ಅವರನ್ನು ಕೈಬಿಟ್ಟಿತ್ತು. ಆದ್ರೆ ಐಪಿಎಲ್ ಹರಾಜಿನಲ್ಲಿ ಮ್ಯಾಕ್ಸ್ ವೆಲ್ ಖರೀದಿಗೆ ಎರಡು ತಂಡಗಳು ಮುಂದೆ ಬಂದಿದ್ದವು. ಕೊನೆಯದಾಗಿ 14.25 ಕೋಟಿಗೆ ಆರ್ ಸಿ ಬಿ ಅವ್ರನ್ನು ಖರೀದಿ ಮಾಡಿದೆ.

ಆರ್ಸಿಬಿ, ಮ್ಯಾಕ್ಸ್ ವೆಲ್ ಗೆ 14.25 ಕೋಟಿ ನೀಡಲು ಸಿದ್ಧವಾಗ್ತಿದ್ದಂತೆ ಅಭಿಮಾನಿಗಳು ದಂಗಾಗಿದ್ದರು. ಆದ್ರೆ ಮ್ಯಾಕ್ಸ್ ವೆಲ್ ಗೆ ಇದ್ರಿಂದ ಅಚ್ಚರಿಯಾಗಿರಲಿಲ್ಲವಂತೆ. ಅನೇಕ ತಂಡಗಳು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ಗಾಗಿ ಹುಡುಕುತ್ತಿದ್ದವು. ತಂಡ ನನ್ನನ್ನು ಆಯ್ಕೆ ಮಾಡಲಿದೆ ಎಂಬ ನಂಬಿಕೆ ನನಗೆ ಇತ್ತು ಎಂದು ಮ್ಯಾಕ್ಸ್ ವೆಲ್ ಹೇಳಿದ್ದಾರೆ. ಆರ್ಸಿಬಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಜೊತೆ ಆಫ್ ಸ್ಪಿನ್ ಬೌಲರ್ ಹುಡುಕಾಟ ನಡೆಸುತ್ತಿದ್ದವು. ಎರಡು ತಂಡಗಳು ನನ್ನ ಖರೀದಿಗೆ ಆಸಕ್ತಿ ತೋರಿದ್ದವು. ಕೊನೆಯಲ್ಲಿ ಆರ್ ಸಿ ಬಿ ಖರೀದಿ ಮಾಡಿತು. ಇದು ನನಗೆ ಸಂತೋಷ ನೀಡಿದೆ ಎಂದು ಮ್ಯಾಕ್ ವೆಲ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...