alex Certify IPL 2021: ಐದು ಬಾರಿ ಚಾಂಪಿಯನ್ ಆಗಿರುವ ʼಮುಂಬೈ ಇಂಡಿಯನ್ಸ್ʼ ಹೊಂದಿದೆ ಕೆಟ್ಟ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL 2021: ಐದು ಬಾರಿ ಚಾಂಪಿಯನ್ ಆಗಿರುವ ʼಮುಂಬೈ ಇಂಡಿಯನ್ಸ್ʼ ಹೊಂದಿದೆ ಕೆಟ್ಟ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಋತು ಶುರುವಾಗಲು ಕೆಲವು ಗಂಟೆಗಳು ಉಳಿದಿವೆ. ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಈ ಲೀಗ್‌ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಐಪಿಎಲ್ ಇತಿಹಾಸದಲ್ಲಿ ಮುಂಬೈ ಅತ್ಯಂತ ಯಶಸ್ವಿ ತಂಡವಾಗಿದೆ. ಆದರೆ ಮುಜುಗರದ ದಾಖಲೆಯಲ್ಲೂ ಈ ತಂಡದ ಹೆಸರಿದೆ.

5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅತ್ಯಂತ ಕೆಟ್ಟ ದಾಖಲೆ ಹೊಂದಿದೆ. ಮುಂಬೈ 2013 ರಿಂದ ಪಂದ್ಯಾವಳಿಯ ಮೊದಲ ಪಂದ್ಯವನ್ನು ಗೆದ್ದಿಲ್ಲ. ಕೊನೆಯ ಬಾರಿ ಮುಂಬೈ 2012 ರಲ್ಲಿ ತಮ್ಮ ಮೊದಲ ಪಂದ್ಯವನ್ನು ಗೆದ್ದಿತು. ಆ ಸಮಯದಲ್ಲಿ ಈ ತಂಡವು 3 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳಿಂದ ಜಯಗಳಿಸಿತ್ತು.

ಮುಂಬೈ ಇಂಡಿಯನ್ಸ್ ಐಪಿಎಲ್ ಪ್ರಶಸ್ತಿಯನ್ನು 5 ಬಾರಿ ಗೆದ್ದಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು 2013 ರಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ನಂತರ ಈ ತಂಡವು 2015, 2017, 2019 ರಲ್ಲಿ ಮತ್ತು ಮತ್ತೆ ಕಳೆದ ವರ್ಷ 2020 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2021 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಎದುರಿಸಲಿದೆ.  ಮುಂಬೈ ಕಳೆದ 10 ಪಂದ್ಯಗಳಲ್ಲಿ 8 ರಲ್ಲಿ ಆರ್‌ಸಿಬಿಯನ್ನು ಸೋಲಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...