alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್‌ ಆಟಗಾರನ ಫೋಟೋ ಬ್ಲರ್‌ ಮಾಡಿದ ಗಂಗೂಲಿ…!

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್‌ಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇನ್ನು ಎರಡು ದಿನದಲ್ಲಿ ಐಪಿಎಲ್‌ಗೆ ಅದ್ಧೂರಿ ಚಾಲನೆ ಸಿಗಲಿದೆ. ಐಪಿಎಲ್‌ ಸಿದ್ಧತೆಯನ್ನು ನೋಡಲು ಯುಎಇಗೆ ತೆರಳಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲ್‌ ಫೋಟೋ ಒಂದು ಇದೀಗ ವೈರಲ್‌ ಆಗಿದೆ.

ಯುಎಇಗೆ ತೆರಳಿ, ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿ ಶಾರ್ಜಾ ಮೈದಾನಕ್ಕೆ ಭೇಟಿ ನೀಡಿರುವ ಅವರು ಐಪಿಎಲ್‌ ಆಡಳಿತ ಮಂಡಳಿ ಹಾಗೂ ಅರಬ್‌ ಕ್ರಿಕೆಟ್‌ ಮಂಡಳಿ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವೇಳೆ ಸೌರವ್‌ ಹಿಂಭಾಗದಲ್ಲಿ ಪಾಕ್‌ ಆಟಗಾರನ ಬೃಹತ್‌ ಫೋಟೋ ಇದ್ದು, ಅದನ್ನು ಬ್ಲರ್‌ ಮಾಡಿ ಹಾಕಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಭಾರತ-ಪಾಕಿಸ್ತಾನ ನಡುವಿನ ಸಮರದಿಂದಾಗಿ ಹಲವು ವರ್ಷಗಳಿಂದ ಭಾರತ-ಪಾಕ್‌ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಪಿಎಲ್‌ನಲ್ಲಿಯೂ ಪಾಕ್‌ ಆಟಗಾರರಿಗೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಪಾಕಿಸ್ತಾನ ಆಟಗಾರನ ಫೋಟೋವನ್ನು ಬ್ಲರ್‌ ಮಾಡಿ ಪೋಸ್ಟ್‌ ಮಾಡಿರುವುದು ಮತ್ತಷ್ಟು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಐಪಿಎಲ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿಕೊಂಡಿದ್ದು, ಅರಬ್‌ನ ಮೂರು ಸ್ಥಳದಲ್ಲಿ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

View this post on Instagram

Famous Sharjah stadium all set to host IPL 2020

A post shared by SOURAV GANGULY (@souravganguly) on

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...