alex Certify ಐಪಿಎಲ್‌ ನಲ್ಲಿ ಹೊಸ ದಾಖಲೆ ಬರೆದ ಶಿಖರ್​ ಧವನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್‌ ನಲ್ಲಿ ಹೊಸ ದಾಖಲೆ ಬರೆದ ಶಿಖರ್​ ಧವನ್​

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಶಿಖರ್​ ಧವನ್​ ಬುಧವಾರದ ಐಪಿಎಲ್​ ಟೂರ್ನಿಯಲ್ಲಿ ಮತ್ತೊಂದು ಅರ್ಧ ಶತಕ ಬಾರಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 33 ಬಾಲ್​ಗೆ 57 ರನ್​​ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಐಪಿಎಲ್​ ಆವೃತ್ತಿಯಲ್ಲಿ 39ನೇ ಅರ್ಧ ಶತಕ ಬಾರಿಸುವ ಮೂಲಕ ಮಿಸ್ಟರ್​ ಗಬ್ಬರ್​ ಸಿಂಗ್​, ವಿರಾಟ್​ ಕೊಹ್ಲಿ, ಸುರೇಶ್​ ರೈನಾ ಹಾಗೂ ರೋಹಿತ್​ ಶರ್ಮಾರ ದಾಖಲೆಗಳನ್ನ ಮುರಿದಿದ್ದಾರೆ. ಈ ಮೂಲಕ ಐಪಿಎಲ್​ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧ ಶತಕ ಬಾರಿಸಿದ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಹಾಗೂ ಸುರೇಶ್​ ರೈನಾ ಐಪಿಎಲ್​​ನಲ್ಲಿ ತಲಾ 38 ಅರ್ಧಶತಕ ಬಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...