alex Certify ಕೊಹ್ಲಿ, ಎಬಿಡಿಯನ್ನ ಐಪಿಎಲ್​​ ನಿಂದ ಬ್ಯಾನ್​ ಮಾಡಿ ಎಂದ ರಾಹುಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ, ಎಬಿಡಿಯನ್ನ ಐಪಿಎಲ್​​ ನಿಂದ ಬ್ಯಾನ್​ ಮಾಡಿ ಎಂದ ರಾಹುಲ್

ರಾಯಲ್​ ಚಾಲೆಂಜರ್ಸ್ ಬೆಂಗಳೂರು ಅಂತಾ ಹೇಳಿದ ಕೂಡಲೇ ಮೊದಲು ನೆನಪಾಗೋದೇ ವಿರಾಟ್​ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ . ಇವರಿಬ್ಬರು ಜೋಡಿಯಾದ್ರು ಸಾಕು…..ಬಾಲ್​ಗಳು ಕ್ರೀಸ್​ನ ಹೊರಗೆ ಹೋಯ್ತು ಅಂತಾನೇ ಲೆಕ್ಕ. 2011ರಿಂದ ಜೋಡಿಯಾಗಿ ಆರ್​ಸಿಬಿಯಲ್ಲಿ ಆಡ್ತಿರೋ ಇವರಿಬ್ಬರನ್ನ ಐಪಿಎಲ್​ನಿಂದ ಬ್ಯಾನ್​ ಮಾಡಿ ಅಂತಾ ಕನ್ನಡಿಗ ಕೆ.ಎಲ್.​ ರಾಹುಲ್​ ಹೇಳಿದ್ದಾರೆ.

ಈ ಬಾರಿಯ ಆವೃತ್ತಿಯಲ್ಲಿ ಉತ್ತಮವಾಗಿ ಆಡ್ತಿರೋ ಕೊಹ್ಲಿ ಪಡೆ ಈವರೆಗೆ ನಡೆದ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನ ಗೆದ್ದಿದೆ. ಇನ್ಸ್ಟಾಗ್ರಾಂ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಕೊಹ್ಲಿ, ರಾಹುಲ್​ಗೆ ಪ್ರಶ್ನೆಯೊಂದನ್ನ ಹಾಕ್ತಾರೆ. ಐಪಿಎಲ್​ ಆವೃತ್ತಿಯಲ್ಲಿ ನೀವು ಯಾವ ಬದಲಾವಣೆ ಮಾಡಲು ಬಯಸ್ತೀರಾ ಎಂಬ ಕೊಹ್ಲಿ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರಾಹುಲ್​…..ನಿಮ್ಮನ್ನ ಹಾಗೂ ಎಬಿಡಿಯನ್ನ ಬ್ಯಾನ್​ ಮಾಡಲಿಚ್ಚಿಸುತ್ತೇನೆ ಅಂತಾ ಹೇಳೋ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಮುಂದಿನ ವರ್ಷ ಐಪಿಎಲ್​ನಲ್ಲಿ ಕೊಹ್ಲಿ ಹಾಗೂ ಎಬಿಡಿಯವರನ್ನ ಬ್ಯಾನ್​ ಮಾಡಬೇಕು. ನೀವಿಬ್ಬರೂ ಈಗಾಗಲೇ ಐಪಿಎಲ್​ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದೀರಾ. ಐಪಿಎಲ್​ ಟೂರ್ನಿಯಲ್ಲಿ ಒಮ್ಮೆ ಒಬ್ಬ ಆಟಗಾರ 5000 ರನ್​​ ಗಳಿಸುತ್ತಿದ್ದಂತೆ ಅವರು ಆಟವನ್ನ ನಿಲ್ಲಿಸಿಬಿಡಬೇಕು. ಇದರಿಂದ ಉಳಿದವರಿಗೂ ಸಾಧನೆ ಮಾಡಲು ಅವಕಾಶ ಸಿಗುತ್ತೆ ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...