alex Certify ಗೂಗಲ್ ನಲ್ಲಿ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರು ಹುಡುಕಿದ್ರೆ ಬರುತ್ತೆ ಈ ನಟಿ ಹೆಸರು…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್ ನಲ್ಲಿ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರು ಹುಡುಕಿದ್ರೆ ಬರುತ್ತೆ ಈ ನಟಿ ಹೆಸರು…! ಇದರ ಹಿಂದಿದೆ ಈ ಕಾರಣ

ಗೂಗಲ್ ನಲ್ಲಿ ಅಪಘಾನಿಸ್ತಾನದ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರನ್ನು ಹುಡುಕಿದ್ರೆ ಬರುವ ಹೆಸರು ದಂಗಾಗಿಸುತ್ತದೆ. ರಶೀದ್ ಖಾನ್ ಪತ್ನಿ ಹೆಸರು ಅನುಷ್ಕಾ ಶರ್ಮಾ ಎಂದು ಗೂಗಲ್ ತೋರಿಸುತ್ತದೆ. ಇದನ್ನು ನೋಡಿ ಅನೇಕರು ಆಘಾತಕ್ಕೊಳಗಾಗಿದ್ದಾರೆ.

ಗೂಗಲ್ ಈಗಿನಿಂದಲ್ಲ. 2018ರಿಂದಲೇ ಹೀಗೆ ತೋರಿಸುತ್ತಿದೆ. ವಾಸ್ತವವಾಗಿ 2018ರ ಸಂದರ್ಶನವೊಂದರಲ್ಲಿ ರಶೀದ್ ತಮ್ಮ ನೆಚ್ಚಿನ ನಟಿಯರ ಹೆಸರು ಹೇಳಿದ್ದರು. ಅನುಷ್ಕಾ ಶರ್ಮಾ ಹಾಗೂ ಪ್ರೀತಿ ಜಿಂಟಾ ನೆಚ್ಚಿನ ನಟಿಯರು ಎಂದಿದ್ದರು. ಇದಾದ ನಂತ್ರ ಗೂಗಲ್ ನೆಚ್ಚಿನ ನಟಿ ಬದಲು ರಶೀದ್ ಖಾನ್ ಹೆಂಡತಿ ಎಂದು ಅನುಷ್ಕಾ ಹೆಸರು ತೋರಿಸುತ್ತಿದೆ.

ರಶೀದ್ ಖಾನ್ ಅಪಘಾನಿಸ್ತಾನ ಕ್ರಿಕೆಟ್ ತಂಡದ ಉಪನಾಯಕ. 2018ರಲ್ಲಿ ಭಾರತದ ವಿರುದ್ಧ ಅಪಘಾನಿಸ್ತಾನ ತಂಡದಲ್ಲಿ ಮೊದಲ ಬಾರಿ ಆಡಿದ್ದರು. ರಶೀದ್ ಖಾನ್ ಗೆ ಮದುವೆಯಾಗಿಲ್ಲ. ಜುಲೈನ ಸಂದರ್ಶನವೊಂದರಲ್ಲಿ ಅಪಘಾನಿಸ್ತಾನ ವಿಶ್ವಕಪ್ ಗೆದ್ದ ಮೇಲೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗ್ತೇನೆ ಎಂದಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...