alex Certify ಶಾಹಿದ್ ಅಫ್ರೀದಿ ಬಣ್ಣ ಬಯಲು ಮಾಡಿದ ದಾನಿಶ್ ಕನೇರಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಹಿದ್ ಅಫ್ರೀದಿ ಬಣ್ಣ ಬಯಲು ಮಾಡಿದ ದಾನಿಶ್ ಕನೇರಿಯಾ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ಅವರು ಶಹೀದ್ ಆಫ್ರೀದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಅಫ್ರೀದಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸೀಮಿತ ಓವರುಗಳ ಕ್ರಿಕೆಟ್ ಬದುಕನ್ನು ಮೊಟಕುಗೊಳಿಸಿದರು ಎಂದು ದೂರಿದ್ದಾರೆ.

ಪಾಕಿಸ್ತಾನ ತಂಡದ ಪರವಾಗಿ ಆಟವಾಡಿದ ಎರಡನೇ ಹಿಂದೂ ಆಟಗಾರ ದಾನೀಶ್ ಕನೇರಿಯಾ 61 ಟೆಸ್ಟ್ ಪಂದ್ಯಗಳನ್ನು ಆಡಿ 261 ವಿಕೆಟ್ ಗಳಿಸಿದ್ದು, 2000 ದಿಂದ 2010 ರ ಅವಧಿಯಲ್ಲಿ ಕೇವಲ 18 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.

ಧರ್ಮದ ಹೊರತಾಗಿ ಶಾಹಿದ್ ಅಫ್ರೀದಿ ತಾರತಮ್ಯ ವರ್ತನೆ ತೋರುತ್ತಿದ್ದು, ಯಾವಾಗಲೂ ನನಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು. ಇದನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತಿತ್ತು. ಅವರು ತಮ್ಮನ್ನು ಸರಿಯಾಗಿ ನಡೆಸಿಕೊಳ್ಳದ ಕಾರಣ ಸೀಮಿತ ಓವರುಗಳ ಕ್ರಿಕೆಟ್ ಬದುಕು ಕೂಡ ಮೊಟಕುಗೊಳ್ಳುವಂತಾಯಿತು ಎಂದು ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...