alex Certify ವಿದ್ಯುತ್ ಬಿಲ್ ನೋಡಿ ದಂಗಾದ ಬಜ್ಜಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಬಿಲ್ ನೋಡಿ ದಂಗಾದ ಬಜ್ಜಿ….!

ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಟ್ವಿಟರ್ ನಲ್ಲಿ ಅನೇಕ ಸಾಮಾಜಿಕ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತಿರುತ್ತಾರೆ. ಈಗ ತಮ್ಮ ಸಮಸ್ಯೆಯೊಂದನ್ನು ಬಜ್ಜಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳಿಂದ ಮುಂಬೈನ ಜನರಿಗೆ ಕರೆಂಟ್ ಬಿಲ್ ದೊಡ್ಡ ಸಮಸ್ಯೆಯಾಗಿದೆ. ಅತಿ ಹೆಚ್ಚು ಬಿಲ್ ಬರ್ತಿದ್ದು, ಅನೇಕರು ಈಗಾಗಲೇ ದೂರು ನೀಡಿದ್ದಾರೆ. ಬಾಲಿವುಡ್ ನ ಅನೇಕ ಪ್ರಸಿದ್ಧ ಕಲಾವಿದರು ಕೂಡ ವಿದ್ಯುತ್ ಬಿಲ್ ಹೆಚ್ಚಿಗೆ ಬಂದಿರುವ ಬಗ್ಗೆ ದೂರು ನೀಡಿದ್ದರು. ಈಗ ಬಜ್ಜಿ ಸರದಿ. ಹರ್ಭಜನ್ ಸಿಂಗ್ ಮನೆ ಕರೆಂಟ್ ಬಿಲ್ 33,900 ರೂಪಾಯಿ ಬಂದಿದೆ. ಸಾಮಾನ್ಯಕ್ಕಿಂತ 7 ಪಟ್ಟು ಹೆಚ್ಚಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇಡೀ ಬೀದಿಯವರ ಕರೆಂಟ್ ಬಿಲ್ ನಮ್ಮನೆಗೆ ಬಂದಂತಿದೆ ಎಂದು ಬಜ್ಜಿ ಹೇಳಿದ್ದಾರೆ. ಇದು ಸಾಮಾನ್ಯಕ್ಕಿಂತ 7 ಪಟ್ಟು ಹೆಚ್ಚಿದೆ. ವಾವ್ಹ್ ಎಂದು ಟ್ವೀಟ್ ಮಾಡಿದ್ದಾರೆ. ಬಜ್ಜಿ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಕೊರೊನಾ ವೈರಸ್ ಕಾರಣಕ್ಕೆ ಮನೆಯಲ್ಲಿದ್ದ ಬಜ್ಜಿ ಶೀಘ್ರವೇ ಐಪಿಎಲ್ ನಲ್ಲಿ ಮೈದಾನಕ್ಕಿಳಿಯಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...