alex Certify ರಣರೋಚಕ ಫೈನಲ್ ನಲ್ಲಿ ಚೆನ್ನೈಗೆ ಭರ್ಜರಿ ಜಯ: 5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಧೋನಿ ಪಡೆಗೆ 20 ಕೋಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಣರೋಚಕ ಫೈನಲ್ ನಲ್ಲಿ ಚೆನ್ನೈಗೆ ಭರ್ಜರಿ ಜಯ: 5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಧೋನಿ ಪಡೆಗೆ 20 ಕೋಟಿ

ಅಹಮದಾಬಾದ್: ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಸಿಕ್ಸರ್, ಬೌಂಡರಿ ಸಿಡಿಸಿದ್ದು ಅವರ ಅಮೋಘ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದು ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಸರಿಗಟ್ಟಿದೆ.

ಮಳೆಯ ಕಾರಣ ಭಾನುವಾರದಿಂದ ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದ ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 5 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಜಯಗಳಿಸಿದೆ. ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುಜರಾತ್ ತಂಡದ ಕನಸು ಭಗ್ನವಾಗಿದೆ.

2010, 2011, 2018, 2021 ಮತ್ತು 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿ ಗಳಿಸಿದೆ. ಎಂಎಸ್ ಧೋನಿ 5ನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಎರಡನೇ ನಾಯಕ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮ ಮೊದಲಿಗರಾಗಿದ್ದಾರೆ.

ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ ನೀಡಲಾಗಿದ್ದು, ರನ್ನರ್ ಅಪ್ ಗುಜರಾತ್ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ.

ಗುಜರಾತ್ ತಂಡದ ಶುಭಮನ್ ಗಿಲ್ 890 ರನ್ ಕಲೆ ಹಾಕಿದ್ದಾರೆ. ಫೈನಲ್ ಪಂದ್ಯದಲ್ಲಿ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರಲ್ಲಿ ಗಳಿಸಿತು. ಸಾಯಿ ಸುದರ್ಶನ್ 47 ಎಸೆತಗಳಲ್ಲಿ 96 ರನ್ ಗಳಿಸಿದರು. ಚೆನ್ನೈ ಇನಿಂಗ್ಸ್ ವೇಳೆ ಮಳೆ ಆರಂಭವಾಗಿ 2 ಗಂಟೆ ಆಟ ಸ್ಥಗಿತಗೊಳಿಸಲಾಗಿತ್ತು. ಡಕ್ ವರ್ಕ್ ಲೂಯಿಸ್ ನಿಯಮದ ಅನ್ವಯ ಚೆನ್ನೈ ತಂಡಕ್ಕೆ 15 ಓವರ್ ಗಳಲ್ಲಿ 171 ರನ್ ಗುರಿ ನೀಡಲಾಗಿದ್ದು, ಚೆನ್ನೈ ತಂಡದ ರವೀಂದ್ರ ಜಡೇಜ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್, ಬೌಂಡರಿ ಸಿಡಿಸಿ ಗೆಲುವಿಗೆ ಕಾರಣರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...