alex Certify ವಿರಾಟ್​ ಕೊಹ್ಲಿ ಧರಿಸುವ ವಾಚ್​​, ಓಡಾಡುವ ಕಾರು ಹಾಗೂ ಮನೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್​ ಕೊಹ್ಲಿ ಧರಿಸುವ ವಾಚ್​​, ಓಡಾಡುವ ಕಾರು ಹಾಗೂ ಮನೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಅನ್ನೋ ಮಾತಿನಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲದೇ ಫೋರ್ಬ್ಸ್​​ 2020ರ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

195 ಕೋಟಿ ರೂಪಾಯಿ ಸಂಪಾದನೆ ಹೊಂದಿರುವ ವಿರಾಟ್​​ ಕೊಹ್ಲಿ ದುಬಾರಿ ವಸ್ತುಗಳನ್ನ ಕೊಳ್ಳುವಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

ವಿರಾಟ್ ಕೊಹ್ಲಿ ಬಳಿ ಇರುವ ಕೆಲ ದುಬಾರಿ ವಸ್ತುಗಳ ಪಟ್ಟಿ ಇಲ್ಲಿದೆ ನೋಡಿ:

ವಿರಾಟ್​ ಕೊಹ್ಲಿಗೆ ದುಬಾರಿ ವಾಚ್​ಗಳು ಅಂದರೆ ತುಂಬಾನೇ ಇಷ್ಟವಂತೆ. ವಿರಾಟ್​ ಕೊಹ್ಲಿ ಬಳಿ ಇರುವ ದುಬಾರಿ ವಾಚ್​​ಗಳಲ್ಲಿ ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ ರೇನ್ಬೋ ಎವೆರೋಸ್ ಗೋಲ್ಡ್ ಸಹ ಒಂದು. ಈ ವಾಚ್​​ನಲ್ಲಿ 56 ವಜ್ರಗಳು ಹಾಗೂ 11 ನೀಲಮಣಿಗಳಿವೆ. ಈ ವಾಚ್​​ನ ಬೆಲೆ ಬರೋಬ್ಬರಿ 69 ಲಕ್ಷ ರೂಪಾಯಿ.


ವಿರಾಟ್​ ಕೊಹ್ಲಿ ಆಡಿ ಇಂಡಿಯಾದ ಜೊತೆ ಬಹಳ ಹಿಂದಿನಿಂದ ಪಾಲುದಾರಿಕೆ ಹೊಂದಿದ್ದಾರೆ. ಕೊಹ್ಲಿ ಈಗಾಗಲೇ ಆಡಿ ಸಂಸ್ಥೆಯ ಸಾಕಷ್ಟು ಕಾರುಗಳನ್ನ ಲಾಂಚ್​ ಮಾಡಿದ್ದಾರೆ. ಕೊಹ್ಲಿ ಬಳಿ ಆರ್​​ಎಸ್​ 5 ಕೂಪ್​​ ಸೇರಿದಂತೆ ಹಲವು ಆಡಿ ಕಾರುಗಳಿವೆ. ಆರ್​ಎಸ್​ 5 ಕೂಪ್​ ಬೆಲೆ 1.10 ಕೋಟಿ ರೂಪಾಯಿ ಆಗಿದೆ.


ಫೈನಾನ್ಶಿಯಲ್​ ಎಕ್ಸ್​​ಪ್ರೆಸ್​ ನೀಡಿರುವ ವರದಿ ಪ್ರಕಾರ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರ ಮುಂಬೈನ ನಿವಾಸ 34 ಕೋಟಿ ರೂಪಾಯಿ ಬೆಲೆ ಹೊಂದಿದೆ. 7171 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮನೆಯು ನಾಲ್ಕು ಮಲಗುವ ಕೋಣೆಗಳನ್ನ ಹೊಂದಿದೆ.

 

 

ಗುರುಗ್ರಾಮದಲ್ಲಿರುವ ವಿರಾಟ್​​ ಕೊಹ್ಲಿ ಬಂಗಲೆ 80 ಕೋಟಿ ರೂಪಾಯಿ ಮೌಲ್ಯ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...