alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಸ್ಮಿಕವಾಗಿ ಸೆರೆಯಾಯ್ತು ಅತ್ಯಪರೂಪದ ಫೋಟೋ…!

ಬಾಳಸಂಗಾತಿಗೆ ಪ್ರಪೋಸ್​ ಮಾಡೋದು ಎಲ್ಲರ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲೊಂದು. ಆದರೆ ಕ್ಯಾಲಿಫೋರ್ನಿಯಾದ ಈ ಜೋಡಿಯ ಈ ಅತ್ಯಮೂಲ್ಯ ಕ್ಷಣವನ್ನ ಸ್ಟಾರ್​ ಅಥ್ಲೀಟ್​ ಹಾಗೂ ಮಾಜಿ ಎನ್​ಬಿಎ ಆಟಗಾರ ಡ್ವ್ಯಾನೆ ವಾಡೇ ಇನ್ನಷ್ಟು ಸ್ಪೆಶಲ್​ ಮಾಡಿದ್ದಾರೆ.

ಸಂತಾ ಬಾರ್ಬರಾ ಸಮುದ್ರದಲ್ಲಿ ವಾಡೇ ವಾಯುವಿಹಾರ ಮಾಡ್ತಿದ್ರು. ಇದೇ ಬೀಚ್​ನಲ್ಲಿ ರ್ಯಾನ್​ ಬಾಸ್ಚ್​ ತಮ್ಮ 5 ವರ್ಷಗಳ ಗೆಳತಿಗೆ ಪ್ರಪೋಸ್​ ಮಾಡುತ್ತಿದ್ದರು. ಇದನ್ನ ಫೋಟೋಗ್ರಾಫರ್​ ಫೋಟೋ ಸೆರೆಹಿಡಿದಿದ್ದಾರೆ. ಈ ಫೋಟೋದಲ್ಲಿ ವಾಡೇ ಕೊಟ್ಟಿರುವ ಎಕ್ಸ್​ಪ್ರೆಷನ್​ ನೆಟ್ಟಿಗರ ಮನ ಕದ್ದಿದೆ.

ಮೂರು ಬಾರಿ ಎನ್​​ಬಿಎ ಚಾಂಪಿಯನ್​ಶಿಪ್​​ ಪ್ರಶಸ್ತಿ ಬಾಚಿರುವ ವಾಡೇ, ಪ್ರೇಮಿಗಳಿಬ್ಬರು ಪ್ರೇಮ ನಿವೇದನೆ ಮಾಡ್ತಿರೋ ಸಂದರ್ಭದಲ್ಲಿ ತಮ್ಮ ಹೃದಯದ ಮೇಲೆ ಕೈ ಇಟ್ಟು ತುಂಬಾ ಕ್ಯೂಟ್​ ಆಗಿ ಪೋಸ್ ಕೊಟ್ಟಿದ್ದಾರೆ. ಬಾಸ್ಚ್​ ಈ ಫೋಟೋವನ್ನ ಇನ್ಸ್ಟಾದಲ್ಲಿ ಫೋಸ್ಟ್ ಮಾಡಿದ್ದು ವಾಡೇ ಅವರನ್ನ ಟ್ಯಾಗ್​ ಮಾಡಿದ್ದಾರೆ.

ಇತ್ತ ವಾಡೇ ಕೂಡ ಈ ಫೋಟೋವನ್ನ ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು ನಿಮ್ಮ ಪ್ರೀತಿಯ ಕ್ಷಣಕ್ಕೆ ನಾನು ಸಾಕ್ಷಿಯಾದೆ ಅಂತಾ ಬರೆದುಕೊಂಡಿದ್ದಾರೆ.

 

Related News

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...