alex Certify ಫೀಲ್ಡಿಂಗ್ ವೇಳೆ ಗಾಯಗೊಂಡು ನೆನಪಿನ ಶಕ್ತಿ ಕಳೆದುಕೊಂಡಿದ್ದ ಡು ಪ್ಲೆಸ್ಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೀಲ್ಡಿಂಗ್ ವೇಳೆ ಗಾಯಗೊಂಡು ನೆನಪಿನ ಶಕ್ತಿ ಕಳೆದುಕೊಂಡಿದ್ದ ಡು ಪ್ಲೆಸ್ಸಿ

ಅಬು ಧಾಬಿಯಲ್ಲಿ ಪಾಕಿಸ್ತಾನ ಸೂಪರ್‌ ಲೀಗ್ (ಪಿಎಸ್‌ಎಲ್) ಪಂದ್ಯವೊಂದರಲ್ಲಿ ಆಡುವ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸ್ಸಿಗೆ ಮರೆವಿನ ಸಮಸ್ಯೆ ಕಾಣಿಸಿಕೊಂಡಿತ್ತು.

ಪಿಎಸ್‌ಎಲ್‌ನಲ್ಲಿ ತಾವು ಪ್ರತಿನಿಧಿಸುವ ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡದ ಪರವಾಗಿ ಫೀಲ್ಡಿಂಗ್ ಮಾಡುತ್ತಿದ್ದಾಗ, ಬೌಂಡರಿಯೊಂದನ್ನು ತಡೆಯುವ ವೇಳೆ ಸಹ ಆಟಗಾರ ಮೊಹಮ್ಮದ್ ಹಸ್ನೈನ್‌ ಜೊತೆಗೆ ಅಪ್ಪಳಿಸಿಕೊಂಡ ಡು ಪ್ಲೆಸ್ಸಿ, ಗಂಭೀರವಾಗಿ ಗಾಯಗೊಂಡಿದ್ದರು.

ಮೂರೇ ವಾರಗಳಲ್ಲಿ ನಿರ್ಮಾಣವಾಗುತ್ತೆ ಪೋರ್ಟಬಲ್‌ ಆಸ್ಪತ್ರೆ…!

ಡು ಪ್ಲೆಸ್ಸಿ ಗಾಯಗೊಂಡ ಕಾರಣ ಆರಂಭಿಕ ಸೈಮ್ ಅಯುಬ್ ಬದಲಿ ಆಟಗಾರರಾಗಿ ಕಣಕ್ಕೆ ಇಳಿದಿದ್ದರು.

“ನಾನು ಹೊಟೇಲ್‌ನಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲಾ ಸಂದೇಶಗಳು ಹಾಗೂ ಬೆಂಬಲಕ್ಕೆ ಧನ್ಯವಾದ. ಗಾಯಗೊಂಡಿದ್ದಲ್ಲದೇ ಸ್ವಲ್ಪ ಮರೆವಿನ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಆದರೆ ನಾನು ಸರಿಹೋಗಲಿದ್ದೇನೆ. ಮೈದಾನಕ್ಕೆ ಶೀಘ್ರವಾಗಿ ಮರಳುವ ಭರವಸೆ ಇದೆ” ಎಂದು ಖುದ್ದು ಡು ಪ್ಲೆಸ್ಸಿ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...