alex Certify BIG NEWS: ತಾಲೀಮು ಶುರು, ಅನುಮತಿಯೊಂದಿಗೆ ಅಭ್ಯಾಸ ಆರಂಭಿಸಿದ ಕ್ರಿಕೆಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾಲೀಮು ಶುರು, ಅನುಮತಿಯೊಂದಿಗೆ ಅಭ್ಯಾಸ ಆರಂಭಿಸಿದ ಕ್ರಿಕೆಟಿಗರು

ಕಿಂಗ್ಸ್ ಟನ್: ಕೊರೊನಾ ಸೋಂಕು ತಡೆಗೆ ಕಠಿಣ ನಿರ್ಬಂಧ ವಿಧಿಸಿದ ಕಾರಣ ಮನೆ ಸೇರಿಕೊಂಡಿದ್ದ ವೆಸ್ಟ್  ಇಂಡೀಸ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಜುಲೈನಲ್ಲಿ ಟೆಸ್ಟ್ ಪಂದ್ಯಗಳನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಇದಕ್ಕಾಗಿ ಪೂರ್ವ ತಯಾರಿ ಆರಂಭಿಸಲಾಗಿದೆ. ತಂಡದ ನಾಯಕ ಜೇಸನ್ ಹೋಲ್ಡರ್, ಕ್ರೆಗ್ ಬ್ರಾಥ್ ವೇಟ್, ಶೇನ್ ಡೋರಿಚ್, ಕೆಮರ್ ರೋಚ್, ರೇಮಂಡ್ ಡೀಫರ್ ಮೊದಲಾದವರು ಕಿಂಗ್ಸ್ ಟನ್ ಓವಲ್ ಮೈದಾನದಲ್ಲಿ ತಾಲೀಮು ಆರಂಭಿಸಿದ್ದಾರೆ

ಸಹಾಯಕ ಕೋಚ್ ರೋಡಿ ಎಸ್ಟ್ ವೀಕ್ ಮಾರ್ಗದರ್ಶನದಲ್ಲಿ ಆಟಗಾರರು ಪ್ರಾಕ್ಟೀಸ್ ಮಾಡಿದ್ದಾರೆ. ಸ್ಥಳೀಯ ಆಡಳಿತದ ಅನುಮತಿ ದೊರೆತ ನಂತರ ಅಭ್ಯಾಸ ಆರಂಭಿಸಲಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...