alex Certify BIG NEWS: ಭಾರತ – ಆಸ್ಟ್ರೇಲಿಯಾ ಟಿ20 ಸರಣಿ ರದ್ದು ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತ – ಆಸ್ಟ್ರೇಲಿಯಾ ಟಿ20 ಸರಣಿ ರದ್ದು ಸಾಧ್ಯತೆ

ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಿತ್ತು. ಆಸ್ಟ್ರೇಲಿಯಾ ಮಧ್ಯೆ 20-ಟ್ವೆಂಟಿ, ಏಕದಿನ ಮತ್ತು ಟೆಸ್ಟ್ ಸರಣಿಗಳು ನಡೆಯಬೇಕಿತ್ತು. ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಟಿ 20 ಸರಣಿ, ಏಕದಿನ ಸರಣಿ ಮತ್ತು ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಆದ್ರೆ  ಅಕ್ಟೋಬರ್ 11 ರಿಂದ ಪ್ರಾರಂಭವಾಗಬೇಕಿದ್ದ  ಟಿ 20 ಸರಣಿಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಇದು ಭಾರತ – ಆಸ್ಟ್ರೇಲಿಯಾ ಪ್ರವಾಸದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ.

ಐಪಿಎಲ್, ಭಾರತದ – ಆಸ್ಟ್ರೇಲಿಯಾ ಪ್ರವಾಸದ ಮೇಲೆ ನೇರ ಪರಿಣಾಮ ಬೀರಬಹುದು. ಸುದ್ದಿಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಅಕ್ಟೋಬರ್‌ನಲ್ಲಿ ನಡೆಸುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ ಅಕ್ಟೋಬರ್ 11 ರಿಂದ ಭಾರತ – ಆಸ್ಟ್ರೇಲಿಯಾ ಸರಣಿ ಮಾತ್ರವಲ್ಲ, ಡಿಸೆಂಬರ್ 3 ರಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯೂ ಐಪಿಎಲ್ ನಿಂದ ರದ್ದಾಗುವ ಸಂಭವವಿದೆ. ಏಷ್ಯಾಕಪ್ ಮುಂದೂಡಲಾಗಿದೆ. ಐಸಿಸಿ ಟಿ 20 ವಿಶ್ವಕಪ್ ಅನ್ನು ಸಹ ಮುಂದೂಡುವ ನಿರೀಕ್ಷೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...