alex Certify ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಗೆಲುವು: ಬಿಸಿಸಿಐನಿಂದ ಆಟಗಾರರಿಗೆ ಬೋನಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಗೆಲುವು: ಬಿಸಿಸಿಐನಿಂದ ಆಟಗಾರರಿಗೆ ಬೋನಸ್

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ -​​ ಗವಾಸ್ಕರ್​ ಟೆಸ್ಟ್​ ಸರಣಿಯನ್ನ ರಹಾನೆ ತಂಡ 2-1 ಅಂತರದಲ್ಲಿ ತಮ್ಮದಾಗಿಸಿಕೊಂಡಿದೆ. ಗಬ್ಬಾ ಮೈದಾನದಲ್ಲಿ 32 ವರ್ಷಗಳ ಸತತ ಸೋಲಿನ ಬಳಿಕ ಇಂದು ಐತಿಹಾಸಿಕ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ 5 ಕೋಟಿ ರೂಪಾಯಿಗಳ ಬೋನಸ್​ ಘೋಷಣೆ ಮಾಡಿದೆ.

ಬ್ರಿಸ್ಬೇಬ್​ನ ಗಬ್ಬಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ಗೆಲುವಿಗೆ 328 ರನ್​ಗಳ ಗುರಿ ನೀಡಿತ್ತು. ರಿಷಭ್​ ಪಂತ್​​, ಶುಭ್​ಮನ್​​​ ಗಿಲ್​ ಹಾಗೂ ಚೇತೇಶ್ವರ ಪೂಜಾರರ ಬ್ಯಾಟಿಂಗ್​​ನಿಂದಾಗಿ ಟೀಂ ಇಂಡಿಯಾ ಐತಿಹಾಸಿಕ ಗೆಲುವನ್ನ ಸಂಪಾದಿಸಿದೆ. ಕಳೆದ 32 ವರ್ಷಗಳಿಂದ ಈ ಮೈದಾನದಲ್ಲಿ ಸೋಲನ್ನೇ ಉಂಡಿದ್ದ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನ ಸೋಲಿಸುವಲ್ಲಿ ಯಶಸ್ವಿಯಾಗಿದೆ.

ರಹಾನೆ ನಾಯಕತ್ವದ ಟೀಂ ಇಂಡಿಯಾದ ಸಾಧನೆಯನ್ನ ಕೊಂಡಾಡಿದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಇದೊಂದು ಅದ್ಭುತ ಗೆಲುವು. ಆಸ್ಟ್ಟೇಲಿಯಾಗೆ ಹೋಗಿ ಸರಣಿಯನ್ನ ಗೆದ್ದ ಈ ಕ್ಷಣ ಭಾರತದ ಕ್ರಿಕೆಟ್​ ಇತಿಹಾಸದ ಪುಟಗಳಲ್ಲಿ ನೆನಪಿನಲ್ಲಿ ಉಳಿಯಲಿದೆ. ಟೀಂ ಇಂಡಿಯಾಗೆ ಬಿಸಿಸಿಐ 5 ಕೋಟಿ ಬೋನಸ್​​ನ್ನು ಘೋಷಣೆ ಮಾಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಎಲ್ಲಾ ಆಟಗಾರರಿಗೆ ಅಭಿನಂದನೆ ಎಂದು ಟ್ವೀಟ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...