alex Certify ಪತ್ನಿ ಜೊತೆ ಕ್ರಿಕೆಟ್ ಆಡಿದ ವಿರಾಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಜೊತೆ ಕ್ರಿಕೆಟ್ ಆಡಿದ ವಿರಾಟ್…!

ಮೊದಲ ಎರಡು ಹಂತದಲ್ಲಿ ದೇಶದಾದ್ಯಂತ ಕಟ್ಟುನಿಟ್ಟಾದ ಲಾಕ್ಡೌನ್ ಜಾರಿಯಲ್ಲಿದ್ದರಿಂದ ಎಲ್ಲರೂ ಮನೆಯಲ್ಲಿ ಕುಳಿತುಕೊಳ್ಳುವಂತಾಗಿತ್ತು. ಆ ಬಳಿಕ ಮೂರನೇ ಹಂತದ ಲಾಕ್ಡೌನ್ ಜಾರಿ ವೇಳೆ ಕೊಂಚ ಸಡಿಲಿಕೆ ಮಾಡಲಾಗಿದ್ದು, ಹೀಗಾಗಿ ಕೆಲವೊಂದು ಚಟುವಟಿಕೆಗಳು ಆರಂಭವಾಗಿದ್ದವು.

ಆದರೆ ಕ್ರೀಡೆ ಹಾಗೂ ಮನೋರಂಜನಾ ಕ್ಷೇತ್ರಗಳಿಗೆ ಈವರೆಗೆ ಯಾವುದೇ ವಿನಾಯಿತಿ ನೀಡದ ಕಾರಣ ಈ ಎರಡೂ ಕ್ಷೇತ್ರಗಳ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಇದರಿಂದಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಮಯದಲ್ಲಿ ಮುಂಬೈನ ವರ್ಲಿಯಲ್ಲಿರುವ ತಮ್ಮ ವೈಭವೋಪೇತ ವಸತಿ ಸಮುಚ್ಚಯದ ಟೆರೇಸ್ ಮೇಲೆ ಅನುಷ್ಕಾ ಜೊತೆ ವಿರಾಟ್ ಕ್ರಿಕೆಟ್ ಆಡಿದ್ದು, ವಿರಾಟ್ ಬೌಲಿಂಗ್ ಮಾಡಿದರೆ ಅನುಷ್ಕಾ ಬ್ಯಾಟಿಂಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...