alex Certify ಧೋನಿ ಜೊತೆಗಿನ ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಜೊತೆಗಿನ ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

ಧೋನಿ ಹಾಗೂ ಗೌತಮ್ ಗಂಭೀರ್ ಒಳ್ಳೆಯ ಸ್ನೇಹಿತರು ಎಂಬುದು ಗೊತ್ತೇ ಇದೆ. ಅದೇ ರೀತಿ ಧೋನಿ – ಗಂಭೀರ್ ಇಬ್ಬರು ರೂಂ ಮೇಟ್ ಕೂಡ ಹೌದು. ಇದೀಗ ಧೋನಿ ಜೊತೆಗಿನ ಹಲವಾರು ವಿಚಾರಗಳನ್ನು ಗೌತಮ್ ಗಂಭೀರ್ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಹೌದು, ಧೋನಿ ಹಾಗೂ ಗಂಭೀರ್ ಒಂದು ತಿಂಗಳಿಗೂ ಹೆಚ್ಚು ಕಾಲ ಒಂದೇ ರೂಂನಲ್ಲಿ ಇದ್ದರಂತೆ. ರೂಂ ಚಿಕ್ಕದಾದ್ದರಿಂದ ಮಲಗಲು ಕಷ್ಟವಾಗುತ್ತಿತ್ತಂತೆ. ಹೀಗಾಗಿ ರೂಂನಲ್ಲಿ ಹಾಕಿದ್ದ ಮಂಚವನ್ನು ತೆಗೆಸಿ ನೆಲದ ಮೇಲೆ ಹಾಸಿಗೆ ಹಾಕಿಕೊಂಡು ಮಲಗುತ್ತಿದ್ದರಂತೆ.

ಇನ್ನು ರೂಂನಲ್ಲಿದ್ದ ಅಷ್ಟು ದಿನಗಳ ಕಾಲವೂ ಧೋನಿಯ ಹೇರ್‌ಸ್ಟೈಲ್ ಬಗ್ಗೆಯೇ ಮಾತುಕತೆ ನಡೆಯುತ್ತಿತ್ತಂತೆ. ಏಕೆಂದರೆ ಧೋನಿ ಆಗ ಉದ್ದ ಕೂದಲು ಬಿಟ್ಟಿದ್ದರು. ಹಾಗಾಗಿ ಇದನ್ನು ನಿರ್ವಹಣೆ ಹೇಗೆ ಮಾಡುತ್ತಾರೆ ಎಂಬ ಕುತೂಹಲ ಇತ್ತು ಅಂತಾ ಗಂಭೀರ್ ಹೇಳಿಕೊಂಡಿದ್ದಾರೆ. ಜೊತೆಗೆ ಒಬ್ಬ ವ್ಯಕ್ತಿಯ ಗುಣ ಅಥವಾ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ರೂಂ ಹಂಚಿಕೊಂಡಾಗಲೇ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...