alex Certify ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಜಯ

ಇಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ನಡೆದ ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡದಲ್ಲಿ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ 5 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಗೆ ತಮ್ಮ ವಿಕೆಟ್ ಒಪ್ಪಿಸಿದರು ಬಳಿಕ ಬಂದ ಜೋಶ್ ಫಿಲಿಪ್ಪೆ 43 ರನ್ ಗಳಿಸಿದ್ದು ಔಟಾದರು ನಾಯಕ ಆರೋನ್ ಫಿಂಚ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಬಚ್ಚನ್ ಜೊತೆಯಾಟವಾಡಿದರು.

ನಂತರ ಆರೋನ್ ಫಿಂಚ್ 69 ರನ್ ಗಳಿಸಿದ್ದು ಸೋಧಿ ಬೌಲಿಂಗ್‌ನಲ್ಲಿ ಔಟಾದರು ನಂತರ ಗ್ಲೆನ್ ಮ್ಯಾಕ್ಸ್ ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು ಕೇವಲ 31 ಎಸೆತಗಳಲ್ಲಿ 70ರನ್ ಗಳಿಸುವ ಮೂಲಕ ಟಿಮ್ ಸೌದಿ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಇವರ ಈ ಸ್ಪೋಟಕ ಇನಿಂಗ್ಸ್ ನಲ್ಲಿ 5 ಸಿಕ್ಸರ್ ಹಾಗೂ 8 ಬೌಂಡರಿಗಳಿದ್ದವು ಆಸ್ಟ್ರೇಲಿಯ ತಂಡ ಒಟ್ಟಾರೆ 4 ವಿಕೆಟ್ ನಷ್ಟಕ್ಕೆ 208 ರನ್ ಗಳ ಮೊತ್ತ ದಾಖಲಿಸಿತು.

ಇನ್ ಸ್ಟಾಗ್ರಾಮ್ ನಲ್ಲೂ ದಾಖಲೆ ಮಾಡಿದ ವಿರಾಟ್ ಕೊಹ್ಲಿ

ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಟಿಮ್ ಸೈಫರ್ಟ್ 4ರನ್ ಗಳಿಸಿ ರಿಲೆ ಮೆರೆಡಿತ್ ಬೌಲಿಂಗ್‌ನಲ್ಲಿ ಔಟಾದರು ನಂತರ ಬಂದ ನಾಯಕ ಕೇನ್ ವಿಲಿಯಮ್ಸನ್ 9ರನ್ ಗಳಿಸಿ ರಿಲೆ ಮೆರೆಡಿತ್ ಗೆ ತಮ್ಮ ವಿಕೆಟ್ ಒಪ್ಪಿಸಿದರು, ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ 43ರನ್ ಗಳಿಸಿದ್ದು ಆ್ಯಡಮ್ ಝಂಪಾ ಬೌಲಿಂಗ್ ನಲ್ಲಿ ಔಟಾದರು.

ಬಳಿಕ ಬಂದ ಗ್ಲೇನ್ ಫಿಲಿಪ್ಸ್ 13ರನ್ ಗಳಿಸಿ ಔಟಾದರೆ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾಗಿದ್ದ ಕೊನ್ವೆ 38ರನ್ ಗಳಿಸಿದ್ದು ಅಗರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು ಸತತ ವಿಕೆಟ್ ಗಳನ್ನು ಕಳೆದುಕೊಂಡು ನ್ಯೂಜಿಲ್ಯಾಂಡ್ ತಂಡ 10 ವಿಕೆಟ್ ನಷ್ಟಕ್ಕೆ 144ರನ್ ಗಳಿಸಿತು ರನ್ ಗಳಿಸುವಲ್ಲಿ ವಿಫಲವಾಯಿತು 5 ಟಿ ಟ್ವೆಂಟಿ ಸರಣಿಯಲ್ಲಿ ಇದುವರೆಗೂ ಮೂರು ಪಂದ್ಯಗಳು ನಡೆದಿದ್ದು ಆಸ್ಟ್ರೇಲಿಯಾ ಇಂದು ಮೊದಲ ಜಯ ಗಳಿಸಿದೆ ನ್ಯೂಜಿಲೆಂಡ್ ತಂಡ 2-1ರಿಂದ ಮುನ್ನಡೆಯಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...