alex Certify ಚೆನ್ನೈ ಸೂಪರ್ ಕಿಂಗ್ಸ್ ಕೈ ಬಿಟ್ಟ ಹರ್ಭಜನ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈ ಸೂಪರ್ ಕಿಂಗ್ಸ್ ಕೈ ಬಿಟ್ಟ ಹರ್ಭಜನ್ ಸಿಂಗ್

ಭಾರತದ ಮಾಜಿ ಸ್ಟಾರ್ ಸ್ಪಿನ್ನರ್ ಹರ್ಭಜನ್ ಸಿಂಗ್ ಐಪಿಎಲ್ ಗೆ ಸಂಬಂಧಿಸಿದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಒಪ್ಪಂದವನ್ನು ಹರ್ಭಜನ್ ಸಿಂಗ್ ಕೊನೆಗೊಳಿಸಿದ್ದಾರೆ. ಈ ಬಗ್ಗೆ ಹರ್ಭಜನ್ ಸಿಂಗ್ ಟ್ವಿಟ್ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಜೊತೆ ನನ್ನ ಒಪ್ಪಂದ ಮುಗಿದಿದೆ ಎಂದು ಹರ್ಭಜನ್ ಸಿಂಗ್ ಟ್ವಿಟ್ ಮಾಡಿದ್ದಾರೆ. ಈ ತಂಡದೊಂದಿಗೆ ಆಡಿರುವುದು ಉತ್ತಮ ಅನುಭವ. ಸುಂದರವಾದ ನೆನಪುಗಳು ಮತ್ತು ಕೆಲವು ಅದ್ಭುತ ಸ್ನೇಹಿತರನ್ನು ಮುಂದಿನ ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ. ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್, ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು, ಎರಡು ಅಧ್ಬುತ ವರ್ಷಗಳು……ಧನ್ಯವಾದ ಎಂದು ಟ್ವಿಟ್ ಮಾಡಿದ್ದಾರೆ.

ಐಪಿಎಲ್ 2020 ರಲ್ಲಿ ಹರ್ಭಜನ್ ಸಿಂಗ್ ತಂಡದಲ್ಲಿರಲಿಲ್ಲ. ವೈಯಕ್ತಿಕ ಕಾರಣಕ್ಕೆ ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಸಾಧ್ಯವಾಗುವುದಿಲ್ಲ ಎಂದು ಹರ್ಭಜನ್ ಹೇಳಿದ್ದರು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಹರ್ಭಜನ್ ಸಿಂಗ್ ಒಬ್ಬರು. ಐಪಿಎಲ್ ಲೀಗ್‌ನಲ್ಲಿ ಹರ್ಭಜನ್ ಸಿಂಗ್ 150 ವಿಕೆಟ್‌  ಪಡೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...