alex Certify ಕ್ರಿಕೆಟ್ ಪ್ರಿಯರಿಗೆ ಶಾಕ್: ಐಪಿಎಲ್ ನಡೆಯೋದು ಡೌಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಪ್ರಿಯರಿಗೆ ಶಾಕ್: ಐಪಿಎಲ್ ನಡೆಯೋದು ಡೌಟ್

ಈ ವರ್ಷದ ಐಪಿಎಲ್ ಮ್ಯಾಚ್ ನಡೆಯೋದು ಬಹುತೇಕ ಡೌಟಾಗಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಈಗಾಗಲೇ ಅನೇಕ ಉದ್ಯಮಗಳು ಮುಚ್ಚಿವೆ. ಏನೇ ವಿನಾಯ್ತಿ ನೀಡಿದರೂ ಅದೆಲ್ಲ ಕೆಲವೊಂದು ಕೆಲಸ ಕಾರ್ಯಗಳಿಗೆ ಮಾತ್ರ. ಹೆಚ್ಚಿನ ಜನ ಸೇರುವಂತಹ ಸ್ಥಳಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಿದ್ದಾಗ ಐಪಿಎಲ್ ನಡೆಯುವುದು ಬಹುತೇಕ ಡೌಟಾಗಿದೆ.

ಇನ್ನು ಇದಕ್ಕೆ ಪುಷ್ಟಿ ನೀಡುವಂತೆ ಬಿಸಿಸಿಐ ಕೂಡ ತನ್ನ ಅಭಿಪ್ರಾಯವನ್ನು ತಿಳಿಸಿದೆ. ನಿನ್ನೆಯಷ್ಟೆ ಕೇಂದ್ರದ ಹೊಸ ಮಾರ್ಗಸೂಚಿಗಳು ಬಿಡುಗಡೆಯಾಗಿವೆ.

ಇದರಲ್ಲಿ ಸ್ಟೇಡಿಯಂ ತೆರೆಯಲು ಅವಕಾಶ ನೀಡಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಕೂಡ ಖುಷಿಯಾಗಿದ್ದರು. ಆದರೆ ಇದೀಗ ಬಿಸಿಸಿಐ, ಅಭಿಮಾನಿಗಳು ನಿರಾಸೆಯಾಗುವಂತಹ ಹೇಳಿಕೆಯೊಂದನ್ನು ನೀಡಿದೆ.

ಸ್ಟೇಡಿಯಂ ತೆರೆದರೂ ಕ್ರಿಕೆಟ್ ಆಡುವುದು ಕಷ್ಟ. ಅದರಲ್ಲೂ ಈ ವರ್ಷದ ಐಪಿಎಲ್ ನಡೆಯುವುದು ಡೌಟ್ ಎಂದು ಅಭಿಪ್ರಾಯಪಟ್ಟಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಈ ಚಿಂತನೆ ಮಾಡಲಾಗಿದೆ. ಇನ್ನು ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯು ಅಕ್ಟೋಬರ್‌ನಿಂದ ನವೆಂಬರ್ ವರೆಗೆ ನಡೆಸಲು ಚಿಂತಿಸಲಾಗುತ್ತಿದೆ ಎನ್ನಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...