alex Certify ಕ್ರಿಕೆಟ್ ದೇವರ ಮೊಟ್ಟಮೊದಲ ದ್ವಿಶತಕದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬೌಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ದೇವರ ಮೊಟ್ಟಮೊದಲ ದ್ವಿಶತಕದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬೌಲರ್

ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೈವವಾಗಿರುವ ಸಚಿನ್ ತೆಂಡೂಲ್ಕರ್ ಅವರನ್ನು ‘ಕ್ರಿಕೆಟ್ ದೇವರು’ ಎಂದೇ ಕರೆಯಲಾಗುತ್ತದೆ. ನೂರಾರು ದಾಖಲೆಗಳನ್ನು ಸಚಿನ್ ತೆಂಡೂಲ್ಕರ್ ಮಾಡಿದ್ದು, ಕೆಲವೊಂದು ದಾಖಲೆಗಳನ್ನು ಯಾರೂ ಮುರಿಯಲು ಸಾಧ್ಯವಿಲ್ಲ.

ಸಚಿನ್ ತೆಂಡೂಲ್ಕರ್ 2010ರಲ್ಲಿ ಗ್ವಾಲಿಯರ್ ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯದಲ್ಲಿ ಮೊಟ್ಟಮೊದಲ ದ್ವಿಶತಕ ದಾಖಲಿಸಿದ್ದು, ಹೊಸ ದಾಖಲೆ ಮಾಡಿದ್ದರು. ಇದೀಗ ಈ ದಾಖಲೆಯ ಕುರಿತು ದಕ್ಷಿಣ ಆಫ್ರಿಕಾದ ಬೌಲರ್ ಡೆಲ್ ಸ್ಟೇಯ್ನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಅಂದಿನ ಪಂದ್ಯದಲ್ಲಿ ಸಚಿನ್ 190 ರನ್ ಗಳಿಸಿದ್ದಾಗ ನಾನು ಎಲ್.ಬಿ. ಬಲೆಗೆ ಕೆಡವಿದ್ದೆ. ಆದರೆ ಅಂಪೈರ್ ಇಯಾನ್ ಗೌಲ್ಡ್,  ಔಟ್ ನೀಡಲಿಲ್ಲ. ಇದನ್ನು ನಾನು ಪ್ರಶ್ನಿಸಿದ ವೇಳೆ, ಇಲ್ಲಿನ ವಾತಾವರಣ ನೋಡು. ಈಗ ನಾನು ಔಟ್ ಎಂದು ಹೇಳಿದರೆ ಹೋಟೆಲ್ ತಲುಪುವುದು ಕಷ್ಟವಾಗುತ್ತದೆ ಎಂದಿದ್ದರು ಎಂದು ಡೆಲ್ ಸ್ಟೇಯ್ನ್ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...