alex Certify ಕ್ರಿಕೆಟ್ ದೇವರ ದಾಖಲೆಯನ್ನು ಮುರಿಯಲಿದ್ದರಾ ಕೊಹ್ಲಿ…? ಏನು ಹೇಳಿದ್ದಾರೆ ಕೇಳಿ ಪಾಕ್ ಕ್ರಿಕೆಟಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ದೇವರ ದಾಖಲೆಯನ್ನು ಮುರಿಯಲಿದ್ದರಾ ಕೊಹ್ಲಿ…? ಏನು ಹೇಳಿದ್ದಾರೆ ಕೇಳಿ ಪಾಕ್ ಕ್ರಿಕೆಟಿಗ

ಕ್ರಿಕೆಟ್ ಎಂದರೆ ಸಾಕು ಮೊದಲು ನೆನಪಾಗೋದು ಸಚಿನ್ ತೆಂಡೂಲ್ಕರ್. ಪುಟ್ಟ ಮಗುವಿನಿಂದ ವಯೊವೃದ್ಧರವರೆಗೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದರೆ ಅದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಇಂದಿಗೂ ತಮ್ಮದೇ ಆದ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಸಚಿನ್ ತೆಂಡೂಲ್ಕರ್ ಅವರ ಆಟಕ್ಕೆ ಮಾರು ಹೋಗದವರಿಲ್ಲ

ಅದೇ ರೀತಿ ಕೊಹ್ಲಿ ಕೂಡ ಒಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರ. ಕೊಹ್ಲಿಗೂ ಕೂಡ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ ಅತ್ಯುತ್ತಮ ಆಟಗಾರನಾದರೂ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿಯಲು ಸಾಧ್ಯವಿಲ್ಲ ಅಂತ ಪಾಕಿಸ್ತಾನದ ಮಾಜಿ ನಾಯಕ ವಸೀಮ್ ಅಕ್ರಮ್‌ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಇಬ್ಬರೂ ವಿಭಿನ್ನ ಆಟಗಾರರು, ಕೊಹ್ಲಿ ಗುರಿ ಮುಟ್ಟುತ್ತಾರೆ. ಹಾಗಂತ ಸಚಿನ್ ದಾಖಲೆಗಳನ್ನು ಮುರಿಯುವುದು ಸಾಧ್ಯವಿಲ್ಲ. ಸಚಿನ್ ಆಟದ ಭಂಗಿಯೇ ಬೇರೆ ಕೊಹ್ಲಿ ಆಟವಾಡುವ ವಿಧಾನವೇ ಬೇರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...