alex Certify ಉಳಿತಾಯ ಖಾತೆಯಾಗಿ ಪರಿವರ್ತನೆಯಾಯ್ತು ಕ್ರಿಕೆಟಿಗರ ‘ಜನ್ ಧನ್’ ಖಾತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಳಿತಾಯ ಖಾತೆಯಾಗಿ ಪರಿವರ್ತನೆಯಾಯ್ತು ಕ್ರಿಕೆಟಿಗರ ‘ಜನ್ ಧನ್’ ಖಾತೆ

ಭಾರತದ ಯುವ ಕ್ರಿಕೆಟಿಗರಿಗೆ ಬಹುಮಾನದ ಮೊತ್ತ ವಿತರಿಸಲು ಬಿಸಿಸಿಐ ಪರದಾಟ ನಡೆಸಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಈ ಕ್ರಿಕೆಟಿಗರು ಹೊಂದಿದ್ದ ಜನ್ ಧನ್ ಖಾತೆ.

ಕಳೆದ ವರ್ಷ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಯುವ ಕ್ರಿಕೆಟಿಗರಿಗೆ 1.50 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು. ಆದರೆ ಆರು ಮಂದಿ ಕ್ರಿಕೆಟಿಗರ ಖಾತೆಗೆ ಹಲವು ಬಾರಿ ಪ್ರಯತ್ನ ಮಾಡಿದರೂ ಹಣ ಜಮೆ ಮಾಡಲು ಸಾಧ್ಯವಾಗಿರಲಿಲ್ಲ.

ಬಳಿಕ ಬಿಸಿಸಿಐ, ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಕ್ರಿಕೆಟಿಗರು ಜನ್ ಧನ್ ಖಾತೆ ಹೊಂದಿರುವುದು ತಿಳಿದು ಬಂತು. ಈ ಖಾತೆಗೆ ಗರಿಷ್ಠ 50 ಸಾವಿರ ರೂಪಾಯಿಗಳನ್ನು ಪಾವತಿ ಮಾಡಲಷ್ಟೇ ಸಾಧ್ಯ. ಹೀಗಾಗಿ ಬಿಸಿಸಿಐ 1.50 ಲಕ್ಷ ರೂಪಾಯಿಗಳ ಬಹುಮಾನದ ಮೊತ್ತವನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಕ್ರಿಕೆಟಿಗರ ಖಾತೆಯನ್ನು ಉಳಿತಾಯ ಖಾತೆಯನ್ನಾಗಿ ಪರಿವರ್ತಿಸಿ ಹಣ ಜಮಾ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...