ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂದಾನ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆಯಾಗಿತ್ತು. ಇದೀಗ ಈ ಬಗ್ಗೆ ಸ್ವತಃ ಸ್ಮೃತಿ ಮಂದಾನ ಮೌನಮುರಿದುದ್ದು, ತಮ್ಮ ಮದುವೆ ರದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಮೃತಿ ಮಂದಾನ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದು, ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ರದ್ದಾಗಿದೆ. ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಬೇಕು. ಈ ವಿಚಾರ ಇಲ್ಲಿಗೆ ನಿಲ್ಲಿಸುವಂತೆ ಸ್ಮೃತಿ ಮನವಿ ಮಾಡಿದ್ದಾರೆ.
ನವೆಂಬರ್ 23ರಂದು ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ನಿಗದಿಯಾಗಿತ್ತು. ಆದರೆ ಸ್ಮೃತಿ ತಂದೆ ಶ್ರೀನಿವಾಸ್ ಅವರ ಅನಾರೋಗ್ಯದಿಂದಾಗಿ ಕೊನೇ ಕ್ಷಣದಲ್ಲಿ ಮದುವೆ ಮುಂದೂಡಿಕೆಯಾಗಿತ್ತು. ಆದರೆ ಈಗ ಮದುವೆ ರದ್ದಾಗಿದೆ ಎಂದು ಸ್ವತಃ ಸ್ಮೃತಿ ಮಂದಾನ ತಿಳಿಸಿದ್ದಾರೆ.
ಕಳೆದ ಕೆಲ ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಹಾಗಾಗಿ ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಅಂತ ಭಾವಿಸುತ್ತೇನೆ. ನಾನು ತುಂಬಾ ಖಾಸಗಿ ವ್ಯಕ್ತಿ. ಅದನ್ನು ಹಾಗೇ ಇಡಲು ಬಯಸುತ್ತೇನೆ. ಆದರೆ ಮದುವೆಯನ್ನು ರದ್ದುಗೊಳಿಸಲಾಗಿದೆ. ಈ ವಿಶ್ಜಯ ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ. ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆ ಗೌರವಿಸಿ, ನಮ್ಮದೇ ಹಾದ್ಯಲ್ಲಿ ಮುಂದುವರೆಯಲು ನಮಗೆ ಅವಕಾಶ ಕೊಡಿ ಎಂದು ವಿನಂತಿಸಿದ್ದಾರೆ.
ಅಲ್ಲದೇ ನಮ್ಮೆಲ್ಲರನ್ನೂ ಮತ್ತು ನನ್ನನ್ನು ಮುನ್ನಡೆಸುವ ಒಂದು ಉನ್ನತ ಉದ್ದೇಶವಿದೆ ಎಂದು ನಾನು ನಂಬುತ್ತೇನೆ. ಅದು ಯಾವಾಗಲೂ ನನ್ನ ದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುತ್ತಿದೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡುವುದನ್ನು ಮತ್ತು ಟ್ರೋಫಿ ಗೆಲ್ಲುವುದನ್ನು ಮುಂದುವರೆಸಬೇಕು ಎಂದು ಕೊಂಡಿದ್ದೇನೆ. ಅದರ ಕಡೆಯ ನನ್ನ ಗಮನ ಶಾಶ್ವತವಾಗುತ್ತದೆ. ಇದು ಮುಂದೆಹೋಗುವ ಸಮಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಮೃತಿ ಪೋಸ್ಟ್ ಮಾಡಿದ್ದಾರೆ.
