ಬೆಂಗಳೂರು: ರಾಜಕೀಯ ಶಾಶ್ವತವಲ್ಲ, ಅದು ನಮ್ಮಪ್ಪನ ಮನೆ ಆಸ್ತಿನೂ ಅಲ್ಲ, ಏನಾಗುತ್ತೋ ಆಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ವಿಧಾನಸೌಧದ ಕೆಂಗಲ್ ಗೇಟ್ ಬಳಿಯ ಪ್ರವೇಶ ದ್ವಾರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಜೊತೆ ಅನೌಪಚಾರಿಕವಾಗಿ ಮಾತನಾಡುತ್ತಾ, ರಾಜಕೀಯ ಶಾಶ್ವತವಲ್ಲ, ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವವನಲ್ಲ. ಏನ್ ಆಗುತ್ತೋ ಆಗಲಿ. ನನಗೆ ಯಾವತ್ತೂ ಯೋಚನೆ ಮಾಡಿ ಗೊತ್ತಿಲ್ಲ. ಏನಾಗುತ್ತೋ ಆಗಲಿ ಎಂದು ಹೇಳಿದ್ದಾರೆ.
ಡಿಸಿಎಂ ಮನೆಯಲ್ಲಿ ಉಪಹಾರ ಸಭೆ ಬಳಿಕ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಜೊತೆ ಮಾತನಾಡುತ್ತಾ ತಮ್ಮ ಮನಸ್ಸಿನ ಮಾತನ್ನು ಸಿಎಂ ಸಿದ್ದರಾಮಯ್ಯ ಆಡಿದ್ದಾರಾ? ಇದು ವೈರಾಗ್ಯದ ಮಾತೆ? ಎಂಬ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
