ಚಿಕ್ಕಮಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಉಸಿರುಗಟ್ಟಿಸಿ ತಾಯಿಯನ್ನೇ ಪಾಪಿ ಪುತ್ರಿ ಹತ್ಯೆಗೈದಿದ್ದಾಳೆ.
ಎನ್ ಆರ್ ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಕೊಲೆ ನಡೆದಿದೆ.
ಕೊಲೆಯಾದ ಮಹಿಳೆಯನ್ನ ಕುಸುಮಾ (62) ಹಾಗೂ ಕೊಲೆ ಮಾಡಿದ ಮಗಳನ್ನ ಸುಧಾ (35) ಎಂದು ಗುರುತಿಸಲಾಗಿದೆ. ಬೇರೆ ಊರಿನಿಂದ ಕೂಲಿ ಕೆಲಸಕ್ಕೆಂದು ಬಂದ ಕುಟುಂಬ ಬಂಡಿಮಠದಲ್ಲಿ ನೆಲೆಸಿತ್ತು.
ಸೋಮವಾರ ರಾತ್ರಿ ಮಲಗಿದ್ದ ತಾಯಿ ಮುಖಕ್ಕೆ ದಿಂಬು ಒತ್ತಿ ಹಿಡಿದು ಹತ್ಯೆ ಮಾಡಿದ್ದಾಳೆ. ಯಾವುದೇ ಅನುಮಾನ ಬಾರದಂತೆ ಅಸಹಜ ಸಾವು ಎಂದು ಬಿಂಬಿಸಿದ್ದಾಳೆ. ಅನುಮಾನಗೊಂಡ ಬಾಳೆಹೊನ್ನೂರು ಪೊಲೀಸರು ಸುಧಾಳ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಕುಸುಮಾ ತನ್ನ ತಂಗಿ ಮಗಳನ್ನ ದತ್ತು ಪಡೆದು ಸಾಕಿ ಮದುವೆ ಮಾಡಿಕೊಟ್ಟಿದ್ದರು. ಕುಸುಮಾ ಮನೆ , ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಸುಧಾ ಪೀಡಿಸುತ್ತಿದ್ದಳು. ಇದಕ್ಕೆ ಕುಸುಮಾ ಒಪ್ಪದಿದ್ದಾಗ ಸುಧಾ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಸುಧಾಳನ್ನ ಪೊಲೀಸರು ಬಂಧಿಸಿದ್ದಾರೆ.
