ಬೆಂಗಳೂರು: ಮಂಗಳಮುಖಿಯರು ಯುವಕನನ್ನು ಅಪಹರಣ ಮಾಡಿ ಮಂಗಳಮುಖಿಯಾಗಿ ಪರಿವರ್ತಿಸಲು ಯತ್ನಿಸಿದ್ದಾರೆ.
25 ವರ್ಷದ ಯುವಕನನ್ನು ಮಂಗಳಮುಖಿಯಾಗಿ ಪರಿವರ್ತಿಸಲು ಯತ್ನಿಸುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಡಿಜೆ ಹಳ್ಳಿ ಠಾಣೆಗೆ ಯುವಕನ ಪೋಷಕರು ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು.
ತಮಿಳುನಾಡಿನ ಮಧುರೈನಿಂದ ಯುವಕನನ್ನು ಪೊಲೀಸರು ರಕ್ಷಣೆ ಮಾಡಿ ಕರೆ ತಂದಿದ್ದಾರೆ. ಡಿಸೆಂಬರ್ 5ರಂದು ಬೆಂಗಳೂರಿನಿಂದ ಮಂಗಳಮುಖಿಯರು ಯುವಕನನ್ನು ಅಪಹರಣ ಮಾಡಿದ್ದರು. ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಯುವಕನನ್ನು ಮಂಗಳಮುಖಿಯಾಗಿ ಪರಿವರ್ತಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
