BREAKING: ಬೀದರ್ ನಲ್ಲಿ ಘೋರ ಘಟನೆ: ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ದುರ್ಮರಣ

ಬೀದರ್: ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ.

8 ವರ್ಷದ ಬಾಲಕಿ ರುತ್ವಿ ಮೃತ ಬಾಲಕಿ. ಗಡಿಕುಶನೂರು ಮೂಲದ ಬಾಲಕಿ ಗುರುನಾನಕ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದಳು. ಶಾಲೆ ಬಸ್ ಇಳಿದು ಕೆಳಗೆ ನಿಂತಿದ್ದನ್ನು ಗಮನಿಸದ ಬಸ್ ಚಾಲಕ ಮುಂದೆ ಚಲಿಸಿದ್ದಾನೆ. ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಸಾವನ್ನಪ್ಪಿದ್ದಾಳೆ.

ಖಾಸಗಿ ಬಸ್ ಚಾಲಕನ ನಿರ್ಲಕ್ಷಕ್ಕೆ ಬಾಲಕಿ ಜೀವವೇ ಹೋಗಿದೆ. ಮಗಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read