ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ಪೋಷಕ -ಶಿಕ್ಷಕರ ಮಹಾಸಭೆ ನಡೆಯಲಿದ್ದು, ಎಲ್ಲರಿಗೂ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ದಿನಾಂಕ 14.11.2025 ರಂದು ಸರ್ಕಾರದ ಆದೇಶದಂತೆ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆಯನ್ನು ಆಯೋಜಿಸಲು ತಿಳಿಸಲಾಗಿದೆ. ಅದರಂತೆ ಸಭೆಗೆ ಹಾಜರಾಗುವ ಪೋಷಕರಿಗೆ ಮಕ್ಕಳಿಗೆ ಹಾಗೂ ಆಹ್ವಾನಿತರಿಗೆ ಬಿಸಿಯೂಟವನ್ನು ವಿತರಿಸಲು ತಿಳಿಸಿದೆ. ಈ ಸಂದರ್ಭದಲ್ಲಿ ಆಹಾರ ಸುರಕ್ಷತೆಯ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಚಿಸಿದೆ.

