ಧಾರವಾಡ: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಗೇಮ್ ಗಳಿಗೆ ಯುವಕರು ಬಲಿಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಮಂಗಳಗಟ್ಟಿಯಲ್ಲಿ ಈ ಘಟನೆ ನಡೆದಿದೆ. ಬಸವರಾಜ್ ಆತ್ಮಹತ್ಯೆಗೆ ಶರಣಾದ ಯುವಕ. ಯು ಕಿ ಟೆಕ್ಸ್ ಫೈನಾನ್ಸ್ ನಲ್ಲಿ ಹಣ ಕಲೆಕ್ಟ್ ಮಾಡುವ ಕೆಲಸ ಮಾಡುತ್ತಿದ್ದ ಯುವಕ ಬಸವರಾಜ್, ಆನ್ ಲೈನ್ ಗೇಮ್ ಚಟಕ್ಕೆ ಬಿದ್ದಿದ್ದ. ಫೈನಾನ್ಸ್ ಕಂಪನಿಗೆ ಕೊಡಬೇಕಿದ್ದ 3 ಲಕ್ಷ ಹಣವನ್ನು ಆನ್ ಲೈನ್ ಗೇಮ್ ಗೆ ಹಾಕಿದ್ದಾನೆ. ಫೈನಾನ್ಸ್ ಕಂಪನಿಗೆ ಹಣ ನೀಡಲಾಗದೇ ಮನನೊಂದಿದ್ದ ಯುವಕ ಈಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
