alex Certify ಯೂಟ್ಯೂಬ್ ಜಾಹೀರಾತಿಗೆ ಬೇಸತ್ತಿದ್ದೀರಾ…? ಆಡ್ ಬ್ಲಾಕ್ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೂಟ್ಯೂಬ್ ಜಾಹೀರಾತಿಗೆ ಬೇಸತ್ತಿದ್ದೀರಾ…? ಆಡ್ ಬ್ಲಾಕ್ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್

ಗೂಗಲ್‌ನ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಅನ್ನು ಇಂದು ಎಲ್ಲರ ಮನೆಯಲ್ಲೂ ಬಳಸಲಾಗುತ್ತಿದೆ. ಮನರಂಜನೆ,‌ ಶಿಕ್ಷಣ, ಅಡುಗೆ ಯಾವುದೇ ಇರಲಿ ಜನರು ಯೂಟ್ಯೂಬ್ ಮೊರೆ ಹೋಗ್ತಿದ್ದಾರೆ.

ಯೂಟ್ಯೂಬ್ ಪ್ರಸಿದ್ಧಿ ಪಡೆಯುತ್ತಿದ್ದಂತೆ ಜಾಹೀರಾತುಗಳು ಹೆಚ್ಚಾಗಿವೆ. ಇದು ನೋಡುಗರಿಗೆ ಕಿರಿಕಿರಿಯುಂಟು ಮಾಡುತ್ತದೆ. ಯೂಟ್ಯೂಬ್ ವೀಕ್ಷಣೆ ಮಾಡುವಾಗ ನಿಮಗೆ ಜಾಹೀರಾತು ಕಾಣಿಸಬಾರದೆಂದ್ರೆ ಕೆಲ ಸರಳ ಟ್ರಿಕ್ಸ್ ಉಪಯೋಗಿಸಬಹುದು.

ಕೆಲ ಸಮಯದ ಹಿಂದೆ ಗೂಗಲ್, ಯೂಟ್ಯೂಬ್ ಚಂದಾದಾರಿಕೆ ಶುರು ಮಾಡಿದೆ. ಇದನ್ನು ಸಕ್ರಿಯಗೊಳಿಸಿದ್ರೆ ಎಲ್ಲಾ ಯೂಟ್ಯೂಬ್ ಜಾಹೀರಾತುಗಳು ನಿರ್ಬಂಧಗೊಳ್ಳಲಿದೆ. ಅದಕ್ಕಾಗಿ ನೀವು ಗೂಗಲ್ ಗೆ ಹಣ ನೀಡಬೇಕಾಗುತ್ತದೆ. ನೀವು ನಿಗದಿಪಡಿಸಿದ ಸಮಯದವರೆಗೆ ಜಾಹೀರಾತು ಕಾಣಿಸುವುದಿಲ್ಲ. ಸಮಯ ಮುಗಿದ ತಕ್ಷಣ, ಜಾಹೀರಾತುಗಳು ಮತ್ತೆ ಕಾಣಿಸುತ್ತವೆ. ಆದ್ರೆ ಯಾವುದೇ ಹಣ ಪಾವತಿ ಮಾಡದೆ ಜಾಹೀರಾತು ಬರದಂತೆ ಮಾಡ್ಬಹುದು.

ಡೆಸ್ಕ್ ಟಾಪ್ ಅಥವಾ ಲ್ಯಾಪ್‌ಟಾಪ್ ಬಳಕೆದಾರರಾಗಿದ್ದರೆ ಮೊದಲು ಗೂಗಲ್ ಕ್ರೋಮ್ ತೆರೆಯಿರಿ. ಯುಆರ್ಎಲ್ ಬಾರ್‌ನಲ್ಲಿ adblocker extension chrome ಟೈಪ್ ಮಾಡಿ ಸರ್ಚ್ ಮಾಡಿ. ಇದರ ನಂತರ ಹೊಸ ವಿಂಡೋ ತೆರೆಯುತ್ತದೆ. ಇಲ್ಲಿ ನಿಮಗೆ ಆಡ್ಬ್ಲಾಕ್ ಕಾಣುತ್ತದೆ. ಅಲ್ಲಿ best ad blocker – Google ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಆಗ ಮತ್ತೊಂದು ವಿಂಡೋ ತೆರೆಯುತ್ತದೆ.

ಇಲ್ಲಿ Add to Chrome ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಇದಾದ ತಕ್ಷಣ ಸಿಸ್ಟಂ ಫೈಲ್ ಒಂದನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುತ್ತದೆ. ಎಲ್ಲವೂ ಸ್ವಯಂಚಾಲಿತವಾಗುತ್ತದೆ. ಒಂದು ವೇಳೆ ಆಗಿಲ್ಲವೆಂದ್ರೆ ಮತ್ತೊಮ್ಮೆ ಪುನರ್ ಸ್ಥಾಪಿಸಿ. ಪ್ರಕ್ರಿಯೆ ಪೂರ್ಣಗೊಂಡ ನಂತರ Google Chrome ಮುಚ್ಚಿ ಮತ್ತೆ ಓಪನ್ ಮಾಡಿ. ಯುಆರ್ಎಲ್ ಬಾರ್‌ನ ಪಕ್ಕದಲ್ಲಿ ವಿಸ್ತರಣೆ ಐಕಾನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಆಡ್‌ಬ್ಲಾಕ್ ಹೆಸರಿನ ಆಯ್ಕೆ ಕಾಣುತ್ತದೆ. ಒಂದು ವೇಳೆ ಇದು ಕಾಣಿಸಿಲ್ಲವೆಂದ್ರೆ ಮತ್ತೊಮ್ಮೆ ಈ ಪ್ರಕ್ರಿಯೆ ಮಾಡಬೇಕು. ಕಾಣಿಸಿದಲ್ಲಿ ಜಾಹೀರಾತಿಲ್ಲದೆ ನೀವು ಯೂಟ್ಯೂಬ್ ವೀಕ್ಷಣೆ ಮಾಡಬಹುದು ಎಂದರ್ಥ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...