alex Certify ‘ಬೊಕ್ಕ’ತಲೆ ಸಮಸ್ಯೆಗೆ ಹೇಳಿ ಗುಡ್ ಬೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೊಕ್ಕ’ತಲೆ ಸಮಸ್ಯೆಗೆ ಹೇಳಿ ಗುಡ್ ಬೈ

ಕೂದಲು ಉದುರುವುದು ಈಗ ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಕೂದಲು ಬಲ ಕಳೆದುಕೊಳ್ಳುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಬೊಕ್ಕತಲೆ ಸಮಸ್ಯೆ ಕಾಡುತ್ತದೆ. ಕೂದಲು ಉದುರದಂತೆ ತಡೆಯಲು ಮಾರುಕಟ್ಟೆಯಲ್ಲಿ ನಾನಾ ಔಷಧಿಗಳು ಬಂದಿವೆ. ಆದ್ರೆ ಔಷಧಿಗಳಿಗೆ ಕೆಮಿಕಲ್ ಇರುವುದ್ರಿಂದ ಕೂದಲ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ. ಕೂದಲ ಸೌಂದರ್ಯ ಕಾಪಾಡಿಕೊಂಡು, ತಲೆ ಬೋಳಾಗದಂತೆ ರಕ್ಷಿಸಿಕೊಳ್ಳಬೇಕೆಂದ್ರೆ ಯೋಗ ನಿಮಗೆ ಸಹಕಾರಿಯಾಗಲಿದೆ.

ಕೂದಲಿಗೆ ಪ್ರಯೋಜನಕಾರಿ ಯೋಗದ ಹೆಸರು ಬಾಲಯಂ ಯೋಗ. ಪ್ರತಿದಿನ 5 ರಿಂದ 10 ನಿಮಿಷಗಳ ಕಾಲ ಬಾಲಯಂ ಯೋಗವನ್ನು ಮಾಡುವುದರಿಂದ, ಅನೇಕ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ. ತಲೆಹೊಟ್ಟು, ಒಣ ನೆತ್ತಿ, ದುರ್ಬಲ ಕೂದಲು, ಕೂದಲು ಉದುರುವುದು ಮತ್ತು ಬೋಳು ಸಮಸ್ಯೆ ಇದ್ರಿಂದ ಕಡಿಮೆಯಾಗುತ್ತದೆ.

ಬಾಲಯಂ ಯೋಗವನ್ನು ನಿಂತಾಗ ಅಥವಾ ಕುಳಿತುಕೊಂಡಾಗ ಅಥವಾ ಪ್ರಯಾಣ ಮಾಡುವಾಗ ಯಾವುದೇ ಸಮಯದಲ್ಲಿ ಮಾಡಬಹುದು. ಎರಡೂ ಕೈಗಳನ್ನು ಎದೆಯ ಮುಂಭಾಗಕ್ಕೆ ಹತ್ತಿರ ತನ್ನಿ. ಎರಡೂ ಕೈ ಬೆರಳುಗಳ ಉಗುರುಗಳನ್ನು ಒಟ್ಟಿಗೆ ಉಜ್ಜಿಕೊಳ್ಳಿ. ಹೆಬ್ಬೆರಳಿನ ಉಗುರುಗಳನ್ನು ಉಜ್ಜುವ ಅಗತ್ಯವಿಲ್ಲ.

ತ್ವರಿತ ಫಲಿತಾಂಶಗಳನ್ನು ಪಡೆಯಲು ಪ್ರತಿದಿನ 5 ರಿಂದ 10 ನಿಮಿಷಗಳ ಕಾಲ ಬಾಲಯಂ ಯೋಗ ಮಾಡಬೇಕು.

ಬಾಲಯಂ ಯೋಗ ಮಾಡುವುದರಿಂದ ಬೋಳು ಸಮಸ್ಯೆ ಕಾಡುವುದಿಲ್ಲ. ಕೂದಲು ಉದುರುವುದನ್ನು ನಿಲ್ಲಿಸಿ, ಕೂದಲು ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಉಗುರುಗಳನ್ನು ಉಜ್ಜುವುದ್ರಿಂದ ಒತ್ತಡ ಬೀಳುವುದ್ರಿಂದ  ತಲೆಯ ರಕ್ತ ಪರಿಚಲನೆ ವೇಗವಾಗುತ್ತದೆ.

ಬಾಲಯಂ ಯೋಗದ ಪ್ರಯೋಜನ 3 ರಿಂದ 6 ತಿಂಗಳಲ್ಲಿ ಕಾಣಿಸುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ಬೆಳವಣಿಗೆ 6 ರಿಂದ 9 ತಿಂಗಳಲ್ಲಿ ಆರಂಭವಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುವವರು ಹಾಗೂ ಗರ್ಭಿಣಿಯರು ಈ ಯೋಗವನ್ನು ಮಾಡಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...