alex Certify ವಿಮಾನದಲ್ಲಿ ಹೆಚ್ಚುವರಿ ಬಟ್ಟೆ ತೆಗೆದುಕೊಂಡು ಹೋಗಲು ಯುವತಿ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಹೆಚ್ಚುವರಿ ಬಟ್ಟೆ ತೆಗೆದುಕೊಂಡು ಹೋಗಲು ಯುವತಿ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..!

ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಹೆಚ್ಚುವರಿ ಲಗೇಜ್​ಗಳ ಕಷ್ಟವೇನು ಅನ್ನೋದು ಚೆನ್ನಾಗಿ ತಿಳಿದಿರುತ್ತೆ. ಎಷ್ಟೋ ಬಾರಿ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬ್ಯಾಗ್ ​ಗಳನ್ನೇ ಬಿಟ್ಟು ಹೋಗಬೇಕಾದ ಪ್ರಸಂಗ ಕೂಡ ಅನೇಕರಿಗೆ ಎದುರಾಗಿರುತ್ತದೆ.

ಮಳೆ ಬಂದಾಗಲೇ ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್‌ ತಗುಲಿ ಮೂವರ ಸಾವು

ನೀವು ಕೂಡ ಇಂತದ್ದೇ ಕಷ್ಟವನ್ನು ಅನುಭವಿಸಿದ್ದರೆ ಈ ವೈರಲ್​ ವಿಡಿಯೋ ನಿಮಗೆ ಒಂದೊಳ್ಳೆ ಪ್ಲಾನ್​ ನೀಡಬಲ್ಲದು.
ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯು ವಿಮಾನದಲ್ಲಿ ಪ್ರಯಾಣಿಸುವ ವೇಳೆ ಬ್ಯಾಗಿನ ಹೆಚ್ಚುವರಿ ಶುಲ್ಕವನ್ನು ತಪ್ಪಿಸೋದು ಹೇಗೆ ಅನ್ನೋದನ್ನು ತೋರಿಸಿಕೊಟ್ಟಿದ್ದಾಳೆ.

ಅನ್ಯಾ ಲ್ಯಾಕೋವಿವಾ ಎಂಬವರು ಶೇರ್​ ಮಾಡಿರುವ ವಿಡಿಯೋದಲ್ಲಿ ಅವರು ಎಲ್ಲಾ ಬಟ್ಟೆಯನ್ನು ದಿಂಬಿನ ಕವರ್​ನಲ್ಲಿ ತುಂಬಿಸಿದ್ದಾರೆ. ಈ ದಿಂಬಿನ ಕವರ್​ನ್ನು ಸೂಟ್​ಕೇಸ್​ನ ಮೇಲೆ ಇಟ್ಟಿದ್ದಾರೆ. ವಿಮಾನ ಏರುವಲ್ಲಿ ಯಶಸ್ವಿಯಾದ ಬಳಿಕ ತಮ್ಮ ದಿಂಬಿನ ಕವರ್ ​ನ್ನು ಅಪ್ಪಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...