alex Certify Video| ಬಾಸ್ಕೆಟ್​ಬಾಲ್​ ಪಂದ್ಯದ ವೇಳೆ ಯುವತಿ ನೃತ್ಯಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video| ಬಾಸ್ಕೆಟ್​ಬಾಲ್​ ಪಂದ್ಯದ ವೇಳೆ ಯುವತಿ ನೃತ್ಯಕ್ಕೆ ನೆಟ್ಟಿಗರು ಫಿದಾ

ಕ್ಯಾಲಿಫೋರ್ನಿಯಾ: ಜನರು ಉತ್ಸಾಹಭರಿತ ಹಾಡುಗಳಿಗೆ ನೃತ್ಯ ಮಾಡುತ್ತಿರುವ ವೀಡಿಯೊಗಳು ಇಂಟರ್ನೆಟ್‌ನ ಪ್ರಮುಖ ಭಾಗವನ್ನು ಒಳಗೊಂಡಿವೆ. ಆದರೆ ಎಲ್ಲವನ್ನೂ ಮೀರಿಸುವಂತಹ ಕೆಲವು ವಿಡಿಯೋಗಳು ಸಕತ್​ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸುದ್ದಿ ಮಾಡುತ್ತಿದೆ.

ಅನಿಶಾ ಥಾಯ್ ಅವರು Instagram ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ಕ್ಯಾಲಿಫೋರ್ನಿಯಾದ ಚೇಸ್ ಸೆಂಟರ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಬಾಸ್ಕೆಟ್​ಬಾಲ್​ ನಡೆಯುತ್ತಿರುವ ವೇಳೆ, ಯುವತಿ ಈ ರೀತಿ ನೃತ್ಯ ಮಾಡಿದ್ದಾಳೆ. ವಿರಾಮದ ವೇಳೆಯಲ್ಲಿ ಅನಿಶಾ ಎಂಬ ಯುವತಿ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು.

ಇದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದೆ. ಆಟ ನಡೆಯುತ್ತಿರುವ ನಡುವೆ ಮಾಡಿರುವ ಈ ನೃತ್ಯವನ್ನೇ ದೊಡ್ಡ ಪರದೆಗಳ ಮೇಲೆ ಹೈಲೈಟ್​ ಮಾಡಿರುವ ಕಾರಣ, ಇದು ಇನ್ನಷ್ಟು ವೈರಲ್ ಆಗಿದೆ. ಹೆಚ್ಚಿನವರು ಈಕೆಯ ನೃತ್ಯಕ್ಕೆ ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...