alex Certify ಬಾಯ್‌ ಫ್ರೆಂಡ್ ತಾಳ್ಮೆ ಪರೀಕ್ಷಿಸಲು ಇಂತದೊಂದು ಕೀಟಲೆ ಮಾಡಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯ್‌ ಫ್ರೆಂಡ್ ತಾಳ್ಮೆ ಪರೀಕ್ಷಿಸಲು ಇಂತದೊಂದು ಕೀಟಲೆ ಮಾಡಿದ ಯುವತಿ

ತನ್ನ ಕಾರಿನ ವಿಂಡ್‌ಸ್ಕ್ರೀನ್‌ ವೈಪರ್‌ಗಳಿಗೆ ನೀರು ತುಂಬಲು ಹೇಳಿ ಮೆಕ್ಯಾನಿಕ್‌ಗೆ 340 ಪೌಂಡ್ (34,000 ರೂ.) ಕೊಟ್ಟಿದ್ದಾಗಿ ತನ್ನ ಬಾಯ್‌ಫ್ರೆಂಡ್‌ಗೆ ಮನವರಿಕೆ ಮಾಡಿಕೊಟ್ಟ ಯುವತಿಯೊಬ್ಬಳು ಆತನ ತಾಳ್ಮೆ ಪರೀಕ್ಷೆ ಮಾಡುತ್ತಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ.

ಶನ್ನನ್ ರಾಬರ್ಟ್ಸ್‌ಸನ್ ಹೆಸರಿನ ಈಕೆ ಟಿಕ್‌ಟಾಕ್‌ನಲ್ಲಿ ಪ್ರಾಂಕ್ ಒಂದನ್ನು ನೋಡಿ ತನ್ನ ಬಾಯ್‌ಫ್ರೆಂಡ್ ಮೇಲೆ ಪ್ರಯೋಗ ಮಾಡಲು ಮುಂದಾಗಿದ್ದಾರೆ.

“ನನ್ನ ಕಾರನ್ನು ಸರ್ವೀಸ್‌ಗಾಗಿ ಬುಕ್ ಮಾಡಿದೆ. ವಿಂಡ್‌ಶೀಲ್ಡ್ ವೈಪರ್‌ಗಳಲ್ಲಿ ನೀರು ಖಾಲಿಯಾಗಿತ್ತು,” ಎಂದ ಶನ್ನನ್‌ಗೆ, “ಅದನ್ನು ತುಂಬಿಸಲು ಸರ್ವೀಸ್ ಮಾಡಿಸಬೇಕಾದ ಅಗತ್ಯವಿಲ್ಲ,” ಎಂದು ಆಕೆಯ ಬಾಯ್‌ಫ್ರೆಂಡ್‌ನಿಂದ ಉತ್ತರ ಬಂದಿದೆ.

ಈ ಸಮಸ್ಯೆಯಿರುವವರು ಎಂದೂ ಬದನೆಕಾಯಿ ಸೇವಿಸಬೇಡಿ

“340 ಪೌಂಡ್‌ಗಳು….. ಅದು ವಿಶೇಷ ನೀರೇ ಇರಬೇಕು. ನಾನು ಮೆಕ್ಯಾನಿ‌ಕ್‌ಗೆ ಆಗಲೇ ಪಾವತಿ ಮಾಡಿದ್ದೇನೆ,” ಎಂದ ಶನ್ನನ್‌ಗೆ, “ಅಯ್ಯೋ ಬೇಡ. ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ನೀನು ಮೊದಲೇ ಪಾವತಿ ಮಾಡಬಾರದಿತ್ತು,” ಎಂದಿದ್ದಾನೆ.

“ಮೊದಲು ಆತನಿಂದ ದುಡ್ಡು ವಾಪಸ್ ಕೇಳು. ನೀನು ಇದನ್ನು ಆಗಲೇ ಮಾಡಿರುವೆ,” ಎಂದು ಶನ್ನನ್‌ಗೆ ಆಕೆಯ ಬಾಯ್‌ಫ್ರೆಂಡ್ ಹೇಳಿದಾಗ ತಾನು ಮಾಡಿದ್ದು ಜೋಕ್ ಅಷ್ಟೇ ಎಂದು ಆಕೆ ಬಾಯಿ ಬಿಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದ್ದು, 60,000ಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...