ಅಂತರ್ಜಾತಿ ವಿವಾಹಗಳು, ಸಂಸ್ಕೃತಿಯ ಸಮ್ಮಿಲನದ ಪ್ರತೀಕ, ಅಮೇರಿಕಾದ ಮಹಿಳೆಯೊಬ್ಬರು ಗೋವಾದ ವ್ಯಕ್ತಿಯನ್ನು ಮದುವೆಯಾದ ನಂತರ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ.
ಜೆಸ್ಸಿಕಾ ಎಂಬ ಅಮೇರಿಕಾದ ಮಹಿಳೆ, ಗೋವಾ ಮೂಲದ ಪತಿಯೊಂದಿಗೆ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಸೂಪರ್ ಮಾರ್ಕೆಟ್‌ನಿಂದ ಹೊರಬರುತ್ತಿರುವ ಜೆಸ್ಸಿಕಾ, ಮಂಗಳಸೂತ್ರ ಮತ್ತು ಕಾಲ್ಗೆಜ್ಜೆಗಳನ್ನು ಧರಿಸಿರುವುದು ಕಂಡುಬಂದಿದೆ.
“ಅಮೇರಿಕಾದಲ್ಲಿ ನನಗೆ ವಿಚಿತ್ರವಾದ ಪ್ರಶ್ನೆಗಳು ಬರುತ್ತವೆ. ವಿವಾಹಿತ ಹಿಂದೂ ಮಹಿಳೆ ಇವುಗಳನ್ನು ಧರಿಸುವುದು ಸಾಮಾನ್ಯವಲ್ಲವೇ ? ನಾನು ಸರಿಯಾಗಿ ಉತ್ತರಿಸಿದೆನಾ ? ನೀವು ಹೇಗೆ ಉತ್ತರಿಸುತ್ತೀರಿ ?” ಎಂದು ಜೆಸ್ಸಿಕಾ ಪ್ರಶ್ನಿಸಿದ್ದಾರೆ. “ನಾನು ಭಾರತೀಯ ಹಿಂದೂ ಪುರುಷನನ್ನು ಮದುವೆಯಾಗಿದ್ದೇನೆ” ಎಂದು ಉತ್ತರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದ್ದು, ಅನೇಕರು ಜೆಸ್ಸಿಕಾ ಅವರ ಉತ್ತರವನ್ನು ಶ್ಲಾಘಿಸಿದ್ದಾರೆ. ಭಾರತೀಯನನ್ನು ಮದುವೆಯಾದ ಬಳಿಕ ಇಲ್ಲಿನ ಸಂಪ್ರದಾಯವನ್ನು ಪಾಲಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ನಾನೂ ದಕ್ಷಿಣ ಭಾರತದ ವ್ಯಕ್ತಿಯನ್ನು ಮದುವೆಯಾಗಿದ್ದು, ನನಗೆ ಅದೇ ಪ್ರಶ್ನೆಯನ್ನು ಕೇಳಲಾಗುತ್ತದೆ. ನಿಮ್ಮಂತೆಯೇ ನನ್ನ ಪ್ರತಿಕ್ರಿಯೆ ಇದೆ. ನಾನು ಭಾರತದಲ್ಲಿನ ವಿಮಾನ ನಿಲ್ದಾಣಗಳಿಗೆ ಹೋದಾಗಲೂ ಭದ್ರತಾ ಸಿಬ್ಬಂದಿ ಕೇಳಿದಾಗ ನಾನು ಭಾರತೀಯನನ್ನು ಮದುವೆಯಾಗಿದ್ದೇನೆ ಎಂದು ಅವರಿಗೆ ಹೇಳುತ್ತೇನೆ. ಅವರಿಗೆ ನನ್ನ ಉತ್ತರ ಇಷ್ಟವಾಗುತ್ತದೆ ಮತ್ತು ‘ನೀವು ನಿಜವಾದ ಭಾರತೀಯ ಮಹಿಳೆ’ ಎಂದು ಹೇಳುತ್ತಾರೆ” ಎಂದು ಮತ್ತೊಬ್ಬ ಮಹಿಳೆ ಪ್ರತಿಕ್ರಿಯಿಸಿದ್ದಾರೆ.