alex Certify ಜಾತಕದಲ್ಲಿ ದುರ್ಬಲವಾದ ಗ್ರಹಗಳನ್ನ ಬಲಪಡಿಸುತ್ತೆ ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾತಕದಲ್ಲಿ ದುರ್ಬಲವಾದ ಗ್ರಹಗಳನ್ನ ಬಲಪಡಿಸುತ್ತೆ ಯೋಗ

ಗ್ರಹಗಳು ಅದೃಷ್ಟದ ಮೇಲೆ ಮಾತ್ರವಲ್ಲ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಗ್ರಹಗಳು ದುರ್ಬಲವಾಗಿದ್ದರೆ ಅದು ವ್ಯಕ್ತಿಯ ಆರೋಗ್ಯ ಏರುಪೇರಾಗಲು ಕಾರಣವಾಗುತ್ತದೆ. ಒಂದಿಲ್ಲೊಂದು ಖಾಯಿಲೆ ಬಿಡದೆ ಕಾಡುತ್ತದೆ. ಗ್ರಹ ದೋಷವನ್ನು ಯೋಗದ ಮೂಲಕ ನಿಯಂತ್ರಿಸಬಹುದು. ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

ಜಾತಕದಲ್ಲಿ ಸೂರ್ಯ ಗ್ರಹದ ದೋಷವಿದ್ದರೆ ಇದು ವ್ಯಕ್ತಿ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ದೃಷ್ಟಿ ಸಮಸ್ಯೆ ಕಾಡುತ್ತದೆ. ಇದರ ನಿಯಂತ್ರಣಕ್ಕೆ ಅನುಲೋಮ-ವಿಲೋಮ, ಭಾಸ್ತಿಕಾ ಪ್ರಾಣಾಯಾಮದ ಜೊತೆ ಸೂರ್ಯ ನಮಸ್ಕಾರ ಮಾಡಬೇಕು.

ಜಾತಕದಲ್ಲಿ ಚಂದ್ರ ಗ್ರಹದ ದೋಷವಿದ್ದರೆ ವ್ಯಕ್ತಿ ಭಾವುಕನಾಗ್ತಾನೆ. ಉದ್ವೇಗ ಹಾಗೂ ಚಡಪಡಿಕೆಗೆ ಒಳಗಾಗ್ತಾರೆ. ಶೀತದ ಸಮಸ್ಯೆ ಕಾಡುತ್ತದೆ. ಚಂದ್ರನನ್ನು ಬಲಪಡಿಸಲು ಅನುಲೋಮ-ವಿಲೋಮದ ಜೊತೆ ಓಂ ಮಂತ್ರ ಜಪಿಸಬೇಕು.

ಜಾತಕದಲ್ಲಿ ಮಂಗಳನ ದೋಷವಿದ್ದರೆ ಮನುಷ್ಯನನ್ನು ಸೋಮಾರಿ ಮಾಡುತ್ತದೆ. ಮಂಗಳ ಗ್ರಹವನ್ನು ಶುಭವಾಗಿಸಲು ಪ್ರತಿ ದಿನ ಪದ್ಮಾಸನ, ಚಿಟ್ಟೆ ಆಸನ, ನವಿಲಿನ ಆಸನ ಮಾಡಬೇಕು.

ಜಾತಕದಲ್ಲಿ ಬುಧ ದುರ್ಬಲನಾಗಿದ್ದರೆ ಚರ್ಮದ ಸಮಸ್ಯೆ ಕಾಡುತ್ತದೆ. ಬುಧವನ್ನು ಶುಭವಾಗಿಸಲು, ಭಾಸ್ತಿಕ, ಭ್ರಮರಿ ಮತ್ತು ಅನುಲೋಮ್-ವಿಲೋಮ್ ಪ್ರಾಣಾಯಾಮವನ್ನು ಪ್ರತಿದಿನ ಮಾಡಿ.

ಗುರು ದುರ್ಬಲವಾಗಿದ್ದರೆ, ಆ ವ್ಯಕ್ತಿಗೆ ಪಿತ್ತಜನಕಾಂಗದ ಸಮಸ್ಯೆ ಕಾಡುತ್ತದೆ. ಬೊಜ್ಜು ಮತ್ತು ಮಧುಮೇಹ ಕಾಡಬಹುದು. ಗುರುವನ್ನು ನಿಯಂತ್ರಿಸಲು, ಸೂರ್ಯ ನಮಸ್ಕಾರ, ಕಪಾಲಭಾತಿ, ಸರ್ವಂಗಾಸನ ಮಾಡಿ.

ಶುಕ್ರ ದುರ್ಬಲನಾಗಿದ್ದರೆ ಜನನಾಂಗದ ಸಮಸ್ಯೆ ಕಾಡುತ್ತದೆ. ಈ ಕಾರಣದಿಂದಾಗಿ ಗರ್ಭಾವಸ್ಥೆಯಲ್ಲಿ ಸಮಸ್ಯೆ ಕಾಡುತ್ತದೆ. ಶುಕ್ರವನ್ನು ಬಲಪಡಿಸಲು ಧನುರಾಸನ, ಹಲಾಸನವನ್ನು ನಿಯಮಿತವಾಗಿ ಮಾಡಿ.

ಶನಿ ದುರ್ಬಲನಾಗಿದ್ದರೆ ಗ್ಯಾಸ್ಟ್ರಿಕ್, ಆಮ್ಲೀಯತೆ, ಸಂಧಿವಾತ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಕಾಯಿಲೆ ಕಾಡುತ್ತದೆ. ಶನಿಯನ್ನು ಬಲಪಡಿಸಲು ಕಪಾಲಭಾತಿ, ಅನುಲೋಮ-ವಿಲೋಮ, ಅಗ್ನಿಸಾರ, ಪವನ ಮುಕ್ತಾಸನ ಮಾಡಿ.

ದುರ್ಬಲ ರಾಹು ವ್ಯಕ್ತಿಯ ಮೆದುಳು ಮತ್ತು ಆಲೋಚನಾ ಶಕ್ತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಾನೆ. ಇದು ವ್ಯಕ್ತಿಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ರಾಹುವನ್ನು ಬಲಪಡಿಸಲು ಅನುಲೋಮ-ವಿಲೋಮ, ಭ್ರಮರಿ, ಭಾಸ್ತಿಕ ಪ್ರಾಣಾಯಾಮ ಮಾಡಿ.

ಜಾತಕದಲ್ಲಿ ಕೇತು ದುರ್ಬಲನಾಗಿದ್ದರೆ ರಕ್ತಹೀನತೆ, ಅಜೀರ್ಣ ಮತ್ತು ಚರ್ಮ ರೋಗ ಕಾಡುತ್ತದೆ. ಕೇತುವನ್ನು ಬಲಪಡಿಸಲು, ಅಗ್ನಿಸಾರ, ಅನುಲೋಮ-ಅನಿಲೋಮ, ಕಪಾಲಬಾತಿ, ಪ್ರಾಣಾಯಾಮ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...