alex Certify ದಂಪತಿ ಮಧ್ಯೆ ಗಲಾಟೆಗೆ ಕಾರಣವಾಯ್ತು ವಾಟ್ಸಾಪ್ ಸ್ಟೇಟಸ್…..! ಇದನ್ನು ಮರೆ ಮಾಡಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
       

Kannada Duniya

ದಂಪತಿ ಮಧ್ಯೆ ಗಲಾಟೆಗೆ ಕಾರಣವಾಯ್ತು ವಾಟ್ಸಾಪ್ ಸ್ಟೇಟಸ್…..! ಇದನ್ನು ಮರೆ ಮಾಡಲು ಹೀಗೆ ಮಾಡಿ

ಮನರಂಜನೆ ಹಾಗೂ ಕೆಲಸಗಳಿಗೆ ವಾಟ್ಸಾಪ್ ಹೆಚ್ಚು ಬಳಕೆಯಾಗ್ತಿದೆ. ವಾಟ್ಸಾಪ್ ಸ್ಟೇಟಸ್ ಬಹುತೇಕರ ಅಚ್ಚುಮೆಚ್ಚು. ಫೋಟೋ, ವಿಡಿಯೋಗಳನ್ನು ಜನರು ಹಂಚಿಕೊಳ್ಳುತ್ತಿರುತ್ತಾರೆ. ದಿನಕ್ಕೆ 10-15 ಬಾರಿ ಸ್ಟೇಟಸ್ ವೀಕ್ಷಣೆ ಮಾಡುವವರ ಸಂಖ್ಯೆ ಜೊತೆ ಸ್ಟೇಟಸ್ ಬದಲಿಸುವವರ ಸಂಖ್ಯೆ ಸಾಕಷ್ಟಿದೆ.

ಆದ್ರೆ ಇದೇ ವಾಟ್ಸಾಪ್ ಸ್ಟೇಟಸ್ ದಂಪತಿ ಮಧ್ಯೆ ಜಗಳಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪತ್ನಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದು, ಪತಿ ಗಲಾಟೆ ಮಾಡಿದ್ದಾನೆ. ಸ್ಟೇಟಸ್ ವಿಷ್ಯಕ್ಕೆ ಪತಿ, ಪತ್ನಿ ಮೇಲೆ ಕೈ ಎತ್ತಿದ್ದು, ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಪತ್ನಿ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಫೋಟೋ ಶೇರ್ ಮಾಡಿದ್ದಾಳೆ. ತಡವಾಗಿ ಮನೆಗೆ ಮರಳಿದ ಪತಿ, ಪತ್ನಿ ಹಂಚಿಕೊಂಡ ಸ್ಟೇಟಸ್ ನೋಡಿ ಕೋಪಗೊಂಡಿದ್ದಾನೆ. ಇಬ್ಬರ ಮಧ್ಯೆ ಜಗಳ ತಾರಕಕ್ಕೇರಿದ್ದು, ಮಗ ಜಗಳ ಬಿಡಿಸಿದ್ದಾನೆ.

ವಾಟ್ಸಾಪ್ ಸ್ಟೇಟಸ್ ನಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳುವ ಮನಸ್ಸಿದ್ದು, ಆದ್ರೆ ಕೆಲವರು ಇದನ್ನು ನೋಡಬಾರದು ಅಂದ್ರೆ ಅದಕ್ಕೂ ವಾಟ್ಸಾಪ್ ಅವಕಾಶ ನೀಡಿದೆ.

ಆಂಡ್ರಾಯ್ಡ್ ಫೋನ್ ನಲ್ಲಿ ವಾಟ್ಸಾಪ್ ತೆರೆಯಿರಿ. ಅಲ್ಲಿ ಸ್ಟೇಟಸ್ ಕ್ಲಿಕ್ ಮಾಡಿ. ಇದರ ನಂತರ ರೈಡ್ ಬದಿಯಲ್ಲಿ ನೀಡಲಾದ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಅಲ್ಲಿ  ಸ್ಟೇಟಸ್ ಗೌಪ್ಯತೆಯ ಆಯ್ಕೆ ಕಾಣುತ್ತದೆ. ಸ್ಟೇಟಸ್ ಗೌಪ್ಯತೆಯಲ್ಲಿ ನನ್ನ ಕಾಂಟೆಕ್ಟ್ ಸ್ವೀಕರಿಸಿ ಮೇಲೆ ಕ್ಲಿಕ್ ಮಾಡಿ.

ಇದರ ನಂತರ ಕಾಂಟೆಕ್ಟ್ ವಿಂಡೋ ತೆರೆಯುತ್ತದೆ. ನೀವು ಮರೆಮಾಡಲು ಬಯಸುವ ಸಂಖ್ಯೆಯನ್ನು ಆಯ್ಕೆ ಮಾಡಿ. ಆಯ್ಕೆ ಮಾಡಿದ ಸಂಖ್ಯೆಗಳಿಗೆ ನಿಮ್ಮ ಸ್ಥಿತಿ ಗೋಚರಿಸುವುದಿಲ್ಲ.

ಐಫೋನ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ಮರೆ ಮಾಡಲು ವಾಟ್ಸಾಪ್ ಸೆಟ್ಟಿಂಗ್‌ಗೆ ಹೋಗಬೇಕು. ಅದರ ನಂತರ ಖಾತೆಯ ಆಯ್ಕೆಯು ಸೆಟ್ಟಿಂಗ್‌ಗಳ ವಿಂಡೋದಲ್ಲಿ ಕಾಣಿಸುತ್ತದೆ. ಅಲ್ಲಿ ನೀಡಿರುವ ಗೌಪ್ಯತೆ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಕೆಲವು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಸ್ಟೇಟಸ್ ಕ್ಲಿಕ್ ಮಾಡಬೇಕು.

ಕಾಂಟೆಕ್ಟ್ ವಿಂಡೋ ಕ್ಲಿಕ್ ಮಾಡಬೇಕು. ಅದು ತೆರೆಯುತ್ತದೆ. ಅಲ್ಲಿ ನಿಮಗೆ ಬೇಕಾದ ಸಂಖ್ಯೆ ಕ್ಲಿಕ್ ಮಾಡಬೇಕು. ನೀವು ಆಯ್ಕೆ ಮಾಡಿದ ಸಂಖ್ಯೆಗೆ ನಿಮ್ಮ ಸ್ಟೇಟಸ್ ಕಾಣಿಸುವುದಿಲ್ಲ.

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...