alex Certify ಮುಂಬೈನಲ್ಲಿ ಸ್ಕೂಟರ್ ಏರಿ ವಿರಾಟ್ – ಅನುಷ್ಕಾ ಶರ್ಮಾ ಜಾಲಿ ರೈಡ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನಲ್ಲಿ ಸ್ಕೂಟರ್ ಏರಿ ವಿರಾಟ್ – ಅನುಷ್ಕಾ ಶರ್ಮಾ ಜಾಲಿ ರೈಡ್…!

ಫಾರ್ಮ್ ಕಳೆದುಕೊಂಡು ಪರದಾಡುತ್ತಿರುವ ಕ್ರಿಕೆಟಿಗ ವಿರಾಟ್​ ಕೊಹ್ಲಿ ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದು, ತಮ್ಮ ಅಭಿಮಾನಿಗಳ ಕಿಚ್ಚು ಹೆಚ್ಚಿಸಿದ್ದಾರೆ.

ಅವರು ತಮ್ಮ ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನು ಮುಂಬೈನಲ್ಲಿ ಸ್ಕೂಟರ್​ನಲ್ಲಿ ರೈಡ್​ಗೆ ಕರೆದುಕೊಂಡು ಹೋಗಿದ್ದು, ಆ ಚಿತ್ರಗಳು ಮತ್ತು ವಿಡಿಯೊ ಸಾಮಾಜಿಕ ಜಾಲತಾಣದ ಪ್ಲಾಟ್​ಫಾರ್ಮ್‌ಗಳಲ್ಲಿ ಹಿಟ್​ ಆಗಿದೆ.

ಅವರಿಬ್ಬರು ಕಪ್ಪು ಹೆಲ್ಮೆಟ್​ ಧರಿಸಿದ್ದರಿಂದ ಮುಖ ಕಾಣಿಸುತ್ತಿಲ್ಲ. ಇಬ್ಬರೂ ಹೊಂದಿಕೆಯಾಗುವ ಬಿಳಿ ಸ್ನೀಕರ್ಸ್​ ಧರಿಸಿ ಕಾಣಿಸಿಕೊಂಡಿದ್ದು, ಆಕ್ಸಸ್​ 125 ಸ್ಕೂಟರ್​ ಏರಿ ಜುಮ್ಮೆಂದು ರಸ್ತೆ ಸವಾರಿ ಹೊರಟಿದ್ದಾರೆ.

ಬೈನ ಮಾನ್ಸೂನ್​ ಹವಾಮಾನವು ಕೊಹ್ಲಿ ಮತ್ತು ಅನುಷ್ಕಾ ತಮ್ಮ ಐಷಾರಾಮಿ ಕಾರುಗಳನ್ನು ಬಿಟ್ಟು ಸ್ಕೂಟರ್​ ಸವಾರಿ ಮಾಡಲು ನಿರ್ಧರಿಸಿದ ಕಾರಣಗಳಲ್ಲಿ ಒಂದಾಗಿರಬಹುದು.

ಈ ಜೋಡಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ವಿರಾಟ್​ ಕೊಹ್ಲಿ ಭಾರತದ ಟೆಸ್ಟ್​ ನಾಯಕತ್ವದಿಂದ ಕೆಳಗಿಳಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಊಹೆ ಮತ್ತು ಟೀಕೆಗಳ ಪ್ರವಾಹ ಕಾಣಿಸಿತ್ತು.

ಕೊಹ್ಲಿ ಅವರ ಶ್ರೇಷ್ಠ ಕ್ರಿಕೆಟ್​ ವೃತ್ತಿಜೀವನ ಮತ್ತು ಅವರ ವೈಯಕ್ತಿಕ ಬೆಳವಣಿಗೆಯ ಕುರಿತು ಅನುಷ್ಕಾ ಶರ್ಮಾ ಭಾವನಾತ್ಮಕ ಟಿಪ್ಪಣಿ ಬರೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...