alex Certify ಕಾರಿನೊಳಗೆ ನುಗ್ಗಿದ್ದ ಕರಡಿ ಹೊರಗಟ್ಟಲು ಮಾಲೀಕನ ಹರಸಾಹಸ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನೊಳಗೆ ನುಗ್ಗಿದ್ದ ಕರಡಿ ಹೊರಗಟ್ಟಲು ಮಾಲೀಕನ ಹರಸಾಹಸ…! ವಿಡಿಯೋ ವೈರಲ್

ತನ್ನ ಕಾರಿನೊಳಗೆ ನುಗ್ಗಿದ್ದ ವಯಸ್ಕ ಕರಡಿಯನ್ನ ಬೆದರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.‌

ಬಣ್ಣ ಬಣ್ಣದ ಟೀ ಶರ್ಟ್ ಧರಿಸಿರುವ ವ್ಯಕ್ತಿಯು ಬಿಳಿ ಬಣ್ಣದ ಕಾರಿನ ಬಾಗಿಲನ್ನ ತೆರೆಯುವ ಮೂಲಕ ಒಳಗಿದ್ದ ಕರಡಿಯು ಹೊರಬರುವಂತೆ ಮಾಡಿದ್ದಾನೆ. ಕರಡಿಯು ಕಾರಿನ ಒಳಭಾಗಗಳನ್ನ ಜಖಂಗೊಳಿಸಿ ಬಳಿಕ ತೆರಳಿದೆ.

ಕರಡಿಯು ಅಲ್ಲಿಂದ ತೆರಳುತ್ತಿದ್ದಂತೆಯೇ ವಾಹನ ಮಾಲೀಕ ಕಾರಿನೊಳಗೆ ಹೋಗಿ ಕರಡಿ ಹಾಳು ಮಾಡಿದ ಭಾಗಗಳನ್ನ ಪರಿಶೀಲನೆ ಮಾಡಿದ್ದಾನೆ.

ವಿಡಿಯೋದಲ್ಲಿರುವ ವ್ಯಕ್ತಿಯನ್ನ ಜೋಸೆಫ್​ ಡೀಲ್​ ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನ ಜೋಸೆಫ್​ ವಾರಗಳ ಹಿಂದೆ ಟಿಕ್​ಟಾಕ್​ನಲ್ಲಿ ಶೇರ್​ ಮಾಡಿದ್ದು ವೈರಲ್​ ಆಗಿದೆ. ಈ ಘಟನೆಯು ಕರಡಿಗಳಿಂದಲೇ ಖ್ಯಾತಿ ಪಡೆದ ಟೆನ್ನೆಸ್ಸಿ ಪಟ್ಟಣದ ಗ್ಯಾಟ್ಲಿನ್​ಬರ್ಗ್​ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...