alex Certify ಅತಿಥಿಗಳೆದುರು ಕುಣಿದು ಕುಪ್ಪಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ವಧು – ವರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಥಿಗಳೆದುರು ಕುಣಿದು ಕುಪ್ಪಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ವಧು – ವರ..!

ಮದುವೆ ಸಮಾರಂಭಗಳೇ ಹಾಗೆ ನೋಡಿ ! ಸಂತಸದ ಅಲೆಯಲ್ಲಿ ತೇಲಾಡುತ್ತಾ ಮಂಟಪದ ಮೇಲೆ ಮದುಮಕ್ಕಳ ಸಂಭ್ರಮವನ್ನು ನೋಡಲು ನೂರಾರು ಮಂದಿ ನೆರೆದಿರುವ ಕ್ಷಣಗಳಲ್ಲಿ ಘಟಿಸುವ ಕೆಲವೊಂದು ಕುತೂಹಲಕಾರಿ ಅಥವಾ ಫನ್ನಿ ಘಟನೆಗಳು ನಡೆದು, ಅದರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತಾಗೇ ಸದ್ದು ಮಾಡಿಬಿಡುತ್ತವೆ.

ಮದುವೆ ಸಮಾರಂಭವೊಂದರಲ್ಲಿ ಅತಿಥಿಗಳೆಲ್ಲಾ ನೆರೆದಿದ್ದ ವೇಳೆ ವೇದಿಕೆ ಮೇಲೆ ಭರ್ಜರಿಯಾಗಿ ಎಂಟ್ರಿ ಕೊಡಬೇಕೆಂಬ ಮದುಮಕ್ಕಳಿಬ್ಬರ ಪ್ಲಾನ್ ಒಂದು ತಲೆಕೆಳಗಾದ ಈ ಫನ್ನಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ತನ್ನ ಮನದನ್ನೆಯನ್ನು ರೊಮ್ಯಾಂಟಿಕ್‌ ಆಗಿ ಬೆನ್ನ ಮೇಲೆ ಕೂರಿಸಿಕೊಂಡು ಕುಣಿಯಲು ಯತ್ನಿಸಿದ ಮದುಮಗ ದೇಹದ ಮೇಲೆ ನಿಯಂತ್ರಣ ತಪ್ಪಿ ನೆಲಕ್ಕೆ ಬೀಳುತ್ತಾನೆ. ಕೂಡಲೇ ಏನೂ ಆಗಿಯೇ ಇಲ್ಲವೆಂಬಂತೆ ಎದ್ದೇಳುವ ಮದುಮಗಳು ತನ್ನ ಕುಣಿತ ಮುಂದುವರೆಸುತ್ತಾಳೆ. ವಿಡಿಯೊಗೆ ನೆಟ್ಟಿಗರಿಂದ ಫನ್ನಿ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...