alex Certify SHOCKING: ಪರೀಕ್ಷೆಯಲ್ಲಿ ಒಂದೇ ಒಂದು ತಪ್ಪು ಬರೆದ ದಲಿತ ವಿದ್ಯಾರ್ಥಿಯನ್ನು ಹೊಡೆದುಕೊಂದ ಶಿಕ್ಷಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಪರೀಕ್ಷೆಯಲ್ಲಿ ಒಂದೇ ಒಂದು ತಪ್ಪು ಬರೆದ ದಲಿತ ವಿದ್ಯಾರ್ಥಿಯನ್ನು ಹೊಡೆದುಕೊಂದ ಶಿಕ್ಷಕ

ಲಖ್ನೋ: ತರಗತಿ ಟೆಸ್ಟ್ ನಲ್ಲಿ ಒಂದು ಉತ್ತರ ತಪ್ಪು ಬರೆದ ವಿದ್ಯಾರ್ಥಿಯನ್ನು ಶಿಕ್ಷಕ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಕಾನ್ಪುರ ಔರಾಯಿಯಾದಲ್ಲಿ ನಡೆದಿದೆ.

ಅಚಲ್ದಾ ಪೊಲೀಸ್ ಠಾಣೆ ವ್ಯಾಪ್ತಿಯ ಫಾನ್‌ ಫುಡ್ ರಸ್ತೆಯಲ್ಲಿರುವ ಆದರ್ಶ ಇಂಟರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ದಲಿತ ಬಾಲಕ ನಿಖಿತ್ ದೊಹ್ರೆ ಮೃತಪಟ್ಟ ವಿದ್ಯಾರ್ಥಿ. ಆತನ ತಂದೆ ದೂರು ನೀಡಿದ್ದು, ತಲೆಮರೆಸಿಕೊಂಡಿರುವ ಶಿಕ್ಷಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸೆ. 13ರಂದು ತರಗತಿಯಲ್ಲಿ ಟೆಸ್ಟ್ ನಡೆದಿದ್ದು ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ನಿಖಿತ್ ಒಂದು ಉತ್ತರ ತಪ್ಪಾಗಿ ಬರೆದಿದ್ದ. ಇದರಿಂದ ಕೋಪಗೊಂಡ ಶಿಕ್ಷಕ ಅಶ್ವಿನಿ ಸಿಂಗ್ ರಾಡ್ ನಿಂದ ನಿಕಿತ್ ನನ್ನು ಮನಬಂದಂತೆ ಥಳಿಸಿ ಕಾಲಿನಿಂದ ಒದ್ದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಇಟಾವಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಚಿಕಿತ್ಸೆಗಾಗಿ ಶಿಕ್ಷಕ 40,000 ರೂ. ನೀಡಿದ್ದ. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬಾಲಕ ಮೃತಪಟ್ಟಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...