alex Certify ಮತ್ತೊಂದು ವಿವಾದದಲ್ಲಿ ಉರ್ಫಿ ಜಾವೆದ್..!‌ ಕೇಸರಿ ಉಡುಪು ಧರಿಸಿ ಕ್ಯಾಟ್‌ ವಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ವಿವಾದದಲ್ಲಿ ಉರ್ಫಿ ಜಾವೆದ್..!‌ ಕೇಸರಿ ಉಡುಪು ಧರಿಸಿ ಕ್ಯಾಟ್‌ ವಾಕ್

ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟು ಹಾಕಿತು. ಈ ಕುರಿತಂತೆ ಪ್ರತಿಭಟನೆಗಳು ನಡೆದವು. ಸಿನಿಮಾ ಬ್ಯಾನ್ ಮಾಡ್ತೀವಿ ಅಂತ ಅನೇಕರು ಹೇಳಿದರು.

ಇದಕ್ಕೆ ಕಾರಣ ಇಷ್ಟೆ ಈ ಹಾಡಿನಲ್ಲಿ ಕೇಸರಿ ಬಿಕಿನಿ ಹಾಕಲಾಗಿದೆ. ಈ ಮೂಲಕ ಕೇಸರಿಗೆ ಅವಮಾನ ಮಾಡಲಾಗಿದೆ ಅಂತ. ಆದರೆ ಚಿತ್ರತಂಡ ಇದ್ಯಾವುದಕ್ಕೂ ಮನ್ನಣೆ ನೀಡಿಲ್ಲ. ಇದೀಗ ಉರ್ಫಿ ಜಾವೇದ್ ಈ ಹಾಡಿಗೆ ಕೇಸರಿ ಬಟ್ಟೆಯಲ್ಲೇ ಅದೇ ಹಾಡಿಗೆ ಕ್ಯಾಟ್ ವಾಕ್ ಮಾಡಿದ್ದಾರೆ.

ಹೌದು, ಸದಾ ತಮ್ಮ ಬಟ್ಟೆಯ ಮೂಲಕವೇ ಸುದ್ದಿಯಲ್ಲಿ ಇರುವ ಹಾಗೂ ವಿವಾದ ಎಳೆದುಕೊಳ್ಳುವ ಈ ನಟಿ ಇದೀಗ ಹೊಸ ವಿವಾದಕ್ಕೆ ಕಾರಣವಾಗುತ್ತಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಈಗಾಗಲೇ ವಿವಾದದಲ್ಲೇ ಇರುವ ಹಾಡಿಗೆ ಕ್ಯಾಟ್ ವಾಕ್ ಮಾಡೋದ್ರ ಜೊತೆಗೆ ಕೇಸರಿ ಬಣ್ಣದ ಬಟ್ಟೆ ಹಾಕಿದ್ದಾಳೆ. ಇದೀಗ ಇವಳ ಈ ನಡೆಗೆ ಅನೇಕರು ವಿರೋಧ ವ್ಯಕ್ತ ಮಾಡೋದ್ರ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡೋದು ಸರಿಯಲ್ಲ. ಈ ರೀತಿ ಆದರೆ ಕಾನೂನಿನ‌ ಮೂಲಕವೇ ಪಾಠ ಕಲಿಸಬೇಕಾಗುತ್ತದೆ ಎಂದು ವಾರ್ನಿಂಗ್ ಮಾಡಿದ್ದಾರೆ. ಸದಾ ಯಾವುದಾದರೊಂದು ವಿವಾದ ಮಾಡಿಕೊಳ್ತಲೇ ಇರುವ ಈ ನಟಿ ಇದೀಗ ಪಠಾನ್ ಸಿನಿಮಾ ಹಾಡಿನ ಮೂಲಕ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಇನ್ನು ಈ ಸಿನಿಮಾದ ಕೆಲವೊಂದು ಸೀನ್ ಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆಯಂತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...