alex Certify ಸುಜುಕಿ GSX250R ಹೊಸ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಜುಕಿ GSX250R ಹೊಸ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ

ದ್ವಿಚಕ್ರವಾಹನ ಪ್ರೇಮಿಗಳಿಗೆ ಸುಜುಕಿ‌ ಕಂಪನಿಯು 2022ರಲ್ಲಿ ಗುಡ್ ನ್ಯೂಸ್ ನೀಡಿದೆ. ನೀಲಿ-ಕಪ್ಪು ಬಣ್ಣದಲ್ಲಿ GSX250R ಮೋಟಾರ್‌ಸೈಕಲ್ ಅನ್ನು ಅನಾವರಣಗೊಳಿಸಿದೆ, ಇದು ಬೈಕ್‌ನ 2020 ಆವೃತ್ತಿಯ ಅಪ್ಡೇಟ್ ವರ್ಷನ್ ಎನಿಸಿಕೊಂಡಿದೆ.

GSX250R ನ ಅಗ್ರೆಸಿವ್ ಶೈಲಿಯ ಹೊರತಾಗಿಯೂ ಆರಾಮದಾಯಕ ಸವಾರಿ ನೀಡುತ್ತದೆ. ಹಿಂಬದಿಯಲ್ಲಿ ಹೊಂದಿಸಲಾದ ಫುಟ್‌ಪೆಗ್‌ ಸವಾರರಿಗೆ ಸಹಕಾರಿ ಯಾಗಲಿದೆ.

ಮೋಟಾರ್‌ ಸೈಕಲ್‌ 15-ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು, 181 ಕೆಜಿ ತೂಗುತ್ತದೆ. ಸೀಟ್ ಎತ್ತರ ಕಡಿಮೆ ಇದ್ದು, ಸ್ಲಿಮ್ ಆದ ಇಂಧನ ಟ್ಯಾಂಕ್ ಮತ್ತು ಒಟ್ಟಾರೆ ಕಡಿಮೆ ತೂಕದೊಂದಿಗೆ GSX250R ಒಂದು ಅತ್ಯಾಕರ್ಷಕ ಸವಾರಿಗೆ ಹೇಳಿ ಮಾಡಿಸಿದಂತಿದೆ.

ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ರಿವರ್ಸ್-ಲಿಟ್ ಎಲ್ ಸಿ ಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಇದೆ. GSX250R 248ಸಿಸಿ ಪ್ಯಾರಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ಚಲಿಸಲಿದ್ದು, ಇದು 24ಬಿಎಚ್ ಪಿ ಶಕ್ತಿ ನೀಡುತ್ತದೆ.

ಸುಜುಕಿ GSX250R ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ $4,999 (ರೂ. 3.82 ಲಕ್ಷ) ಗೆ ನಿಗದಿಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...