alex Certify ಭಾರತದ ಮಾರುಕಟ್ಟೆಗೆ ಬರುತ್ತಾ ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮಾರುಕಟ್ಟೆಗೆ ಬರುತ್ತಾ ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌…?

ಹೋಂಡಾ ಮೋಟರ್‌ ಸೈಕಲ್ಸ್‌ ಮತ್ತು ಸ್ಕೂಟರ್ಸ್‌ ತನ್ನ 2022 ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌ ಅನ್ನು ಇಟಲಿಯ ಮಿಲನ್‌ನಲ್ಲಿ ಆಯೋಜಿಸಲಾಗಿರುವ 2021 ಇಐಸಿಎಂಎ ಮೋಟರ್‌ ಶೋನಲ್ಲಿ ಬಹಿರಂಗಪಡಿಸಿದೆ.

2022 ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರದೇ ಇದ್ದರೂ ಯೂರೋಪ್‌ನಲ್ಲಿ ಜನಪ್ರಿಯವಾಗಿದೆ. 2015ರಲ್ಲಿ ಲಾಂಚ್‌ ಆದಂದಿನಿಂದ ಇದುವರೆಗೂ 80,000 ಘಟಕಗಳು ಮಾರಾಟಗೊಂಡಿವೆ.

ರಿಲ್ಯಾಕ್ಸ್ ಮೂಡ್‌ ನಲ್ಲಿ ಜೀಪ್ ಡ್ರೈವ್‌ ಮಾಡಿದ RJD ಮುಖ್ಯಸ್ಥ ಲಾಲೂ

ನೋಡಲು ಸ್ಪೋರ್ಟ್ ಬೈಕ್‌ನಂತೆ ಕಾಣುವ 2022 ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌ಎಚ್‌ಎಸ್‌ಟಿಸಿ, ಎಲೆಕ್ಟ್ರಿಕ್ ಪರದೆ, ಯುಎಸ್‌ಬಿ ಟೈಪ್-ಸಿ ಸಾಕೆಟ್, ಹೆಲ್ಮೆಟ್‌ಗಳ ದಾಸ್ತಾನಿಗೆ ಜಾಗ, ಎಲ್‌ಇಡಿ ದೀಪಗಳು, ಸ್ಮಾರ್ಟ್ ಕೀ ಸೇರಿದಂತೆ ಅನೇಕ ಆಧುನಿಕ ಫೀಚರ್‌ಗಳನ್ನು ಹೊಂದಿದೆ.

ಯಮಹಾ ಏರಾಕ್ಸ್ ಮತ್ತು ಆಪ್ರಿಲಿಯಾ ಎಸ್‌ಆರ್‌160 ಭಾರತದ ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, 2022 ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌ ಅನ್ನು ಇಲ್ಲಿಗೆ ತರಲು ಹೋಂಡಾ ಮೋಟರ್ಸ್ ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಖುದ್ದು ಹೋಂಡಾ ಇದುವರೆಗೂ ಕೊಟ್ಟಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...