alex Certify ಆನ್‌ ಲೈನ್‌ ನಲ್ಲಿ ಪರಿಚಯವಾದ ಹುಡುಗನೊಂದಿಗೆ ಎಸ್ಕೇಪ್: ಸೂರತ್‌ನಲ್ಲಿ ಪತ್ತೆಯಾದ ಅಪ್ರಾಪ್ತೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್‌ ಲೈನ್‌ ನಲ್ಲಿ ಪರಿಚಯವಾದ ಹುಡುಗನೊಂದಿಗೆ ಎಸ್ಕೇಪ್: ಸೂರತ್‌ನಲ್ಲಿ ಪತ್ತೆಯಾದ ಅಪ್ರಾಪ್ತೆಯರು

ಸೋಶಿಯಲ್ ಮೀಡಿಯಾ ಅನ್ನೋದು ಒಂದು ಮಾಯಾವಿ ಲೋಕ. ಈ ಸತ್ಯ ಎಲ್ಲರಿಗೂ ಗೊತ್ತು. ಆದರೂ ಇಲ್ಲಿ ಕಾಣಿಸಿದ್ದನ್ನೆಲ್ಲ ನಂಬುವುದನ್ನ ಮಾತ್ರ ಬಿಡೋಲ್ಲ. ಇದರಿಂದಲೇ ಅದೆಷ್ಟೋ ಜನರು ತಮ್ಮ ಬದುಕನ್ನೇ ಸರ್ವನಾಶ ಮಾಡಿಕೊಂಡಿದ್ದಾರೆ. ಇದೇ ಸೋಶಿಯಲ್ ಮೀಡಿಯಾದಿಂದಾಗಿ ಮುಂಬೈನ ಇಬ್ಬರು ಅಪ್ರಾಪ್ತೆ ಬಾಲಕಿಯರು ದಾರಿ ತಪ್ಪಿದ್ದರು. ಆದರೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅವರ ಹಾಳಾಗಲಿರುವ ಬದುಕನ್ನ ರಕ್ಷಿಸಿದ್ದಾರೆ.

ಸೋಶಿಯಲ್ ಮೀಡಿಯಾ ಮಾಧ್ಯಮದ ಮೂಲಕ ಅಪರಿಚಿತರು ಪರಿಚಯ ಆಗೋದು ಸಹಜ. ಹೀಗೆ ಪರಿಚಯ ಆದ ವ್ಯಕ್ತಿಯೊಂದಿಗೆ ಮುಂಬೈನ ಇಬ್ಬರು ಅಪ್ರಾಪ್ತೆ ಬಾಲಕಿಯರು ನಾಪತ್ತೆಯಾಗಿದ್ದರು. ಕಳೆದ ಒಂದು ವಾರದಿಂದಲೂ ಬಾಲಕಿಯರು ಹುಡುಕಿದರೂ ಪತ್ತೆಯಾಗದ ಕಾರಣ ಪಾಲಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಈ ಆಪ್ಟಿಕಲ್ ಭ್ರಮೆ‌ ಚಿತ್ರದಲ್ಲಿರುವ ಬೆಕ್ಕನ್ನು ಗುರುತಿಸಬಲ್ಲಿರಾ…?

ಜೂನ್ 27ರಂದು ಮನೆಯಿಂದ ಟ್ಯೂಶನ್‌ ನೆಪದಿಂದ ಹೊರ ಹೋದ ಬಾಲಕಿಯರು ಮತ್ತೆ ಮರಳಿ ಬಂದಿಲ್ಲ. ಗಾಬರಿಯಾಗಿರುವ ಪಾಲಕರು ಪೊಲೀಸರ ಬಳಿ ಹೋಗಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಬಾಲಕಿಯರ ಫೋಟೋ ಮತ್ತು ಮೊಬೈಲ್ ನಂಬರ್‌ ಸಂಗ್ರಹ ಮಾಡಿ, ಇಬ್ಬರನ್ನೂ ಹುಡುಕಿದ್ದಾರೆ. ಕೊನೆಗೆ ಇವರು ಪತ್ತೆಯಾಗಿದ್ದು ಸೂರತ್‌ನಲ್ಲಿ. 11 ಮತ್ತು 13 ವರ್ಷದ ಈ ಬಾಲಕಿಯರು ಆನ್‌ಲೈನ್‌ನಲ್ಲಿ ಪರಿಚಯ ಆದ 16 ವರ್ಷದ ಹುಡುಗನನ್ನ ಭೇಟಿಯಾಗಲು ಹೋಗಿದ್ದಾಗಿ ಹೇಳಿದ್ದಾರೆ. ಇವರು ಮೂವರು ಸೇರಿ ರಾಜಸ್ತಾನ ಸುತ್ತು ಹಾಕಲು ಹೋಗಿದ್ದರು ಅಂತ ಹೇಳಿದ್ದಾರೆ.

ಇವರು ಮೂವರು ಇನ್‌ಸ್ಟಾಗ್ರಾಮ್‌ ಗ್ರಾಮ್‌ನಲ್ಲಿ ಪರಿಚಯ ಆಗಿದ್ದರು ಅಂತ ಹೇಳಲಾಗಿದೆ. ಈಗ ಸ್ಥಳೀಯ ಸಾಂತಾಕ್ರೂಸ್‌ ಪೊಲೀಸರು ಹುಡುಗನ ಮೇಲೆ ಕಿಡ್ನ್ಯಾಪಿಂಗ್ ಕೇಸ್ ಹಾಕಿ ಬಂಧಿಸಿದ್ದಾರೆ. ಈಗ ಆತನನ್ನ ರಿಮ್ಯಾಂಡ್‌ ಹೋಂನಲ್ಲಿ ಇಟ್ಟಿದ್ದಾರೆ. ಈಗ ಮೂವರ ಹೇಳಿಕೆಯನ್ನೂ ತೆಗೆದುಕೊಂಡಿದ್ದು, ಇವರು ಭೇಟಿಯ ಹಿಂದಿರೋ ಅಸಲಿ ಉದ್ದೇಶ ಈಗ ಬಯಲಾಗಿದೆ.

ಅಸಲಿಗೆ 16 ವರ್ಷದ ಹುಡುಗ ಈ ಬಾಲಕಿಯರು ಆನ್‌ಲೈನ್‌ನಲ್ಲಿ ಪರಿಚಯ ಆದ ನಂತರ ಇವರನ್ನ ಭೇಟಿಯಾಗಲು ಮುಂಬೈಗೆ ಬಂದಿದ್ದ. ಅದರಲ್ಲಿ 11ವರ್ಷದ ಬಾಲಕಿ ತನ್ನ ಗೆಳತಿಯನ್ನ ಕರೆದುಕೊಂಡು ಹೋಗಿದ್ದಾಳೆ. ಆ ದಿನವೇ ಹುಡುಗಿಯ ತಾಯಿ, ಮಗಳು ನಾಪತ್ತೆಯಾಗಿರೋದು ಸಾಂತಾಕ್ರೂಸ್‌ ಪೊಲೀಸರ ಗಮನಕ್ಕೆ ತಂದಿದ್ದಾಳೆ. ಬಾಲಕಿಯ ಗೆಳತಿಯರನ್ನ ವಿಚಾರಿಸಿದಾಗ ಅವರು ಸಂಜೆ 7ಕ್ಕೆನೇ ಮನೆಯಿಂದ ಹೊರಟಿರುವುದಾಗಿ ಹೇಳಿದ್ದಾರೆ. ಇದೆಲ್ಲದರ ಆಧಾರದ ಮೇಲೆ ಕಿಡ್ನ್ಯಾಪಿಂಗ್‌ ಕೇಸ್‌ ಹಾಕಿದ್ದಾರೆ.

ದೂರು ದಾಖಲಾಗಿದ್ದ ತಕ್ಷಣ ಪೊಲೀಸ್‌ ನಿರೀಕ್ಷಕ ಬಾಳಾಸಾಹೇಬ್‌ ತಾಂಬೆ ಇವರು ತಮ್ಮ ತಂಡಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಬಾಲಕಿಯರಿಗೆ ಯಾವುದೇ ಅಪಾಯ ಎದುರಾಗುವ ಮುನ್ನವೇ ಅವರನ್ನ ಹುಡುಕುವ ಸವಾಲು ಅವರ ಮುಂದೆ ಇತ್ತು ಅಂತ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ಕೊನೆಗೆ ಮೊಬೈಲ್‌ ಲೈವ್‌ ಲೊಕೇಶನ್‌ ಆಧಾರದ ಮೇಲೆ ಹುಡುಕಿದ್ದಾರೆ. ಆ ಸಮಯದಲ್ಲಿ ಅವರು ಗುಜರಾತ್‌ ಕಡೆಗೆ ರೈಲಿನಲ್ಲಿ ಹೋಗುತ್ತಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...